ಜಮೀನ್ದಾರರ ಜೇಬಿನಲ್ಲಿ
ಕೂಲಿಕಾರ ರೈತರು
ಹೊರಬಂದು ಊರಿನಲ್ಲಿ
ಕಾಲೂರಲು ಕಾದರು
ಕಾದು ಕಾದು ಕೆಂಪಾಗಿ
ಜೇಬ ಜೈಲು ಸುಟ್ಟರು
ಕೊಬ್ಬಿ ಕೂತ ಒಡೆಯನ
ಹೊಟ್ಟೆಯೊದ್ದು ಬಂದರು
ಬತ್ತಿಹೋದ ಕಂಠದಲ್ಲಿ
ಒತ್ತಿ ಬಂತು ‘ಬಂಡಾಯ’
ಕೆಸರಾದ ಕೈಗಳಿಗೆ
ನೆಲ ಕೇಳುವ ನ್ಯಾಯ.
*****

ಕನ್ನಡ ನಲ್ಬರಹ ತಾಣ
ಜಮೀನ್ದಾರರ ಜೇಬಿನಲ್ಲಿ
ಕೂಲಿಕಾರ ರೈತರು
ಹೊರಬಂದು ಊರಿನಲ್ಲಿ
ಕಾಲೂರಲು ಕಾದರು
ಕಾದು ಕಾದು ಕೆಂಪಾಗಿ
ಜೇಬ ಜೈಲು ಸುಟ್ಟರು
ಕೊಬ್ಬಿ ಕೂತ ಒಡೆಯನ
ಹೊಟ್ಟೆಯೊದ್ದು ಬಂದರು
ಬತ್ತಿಹೋದ ಕಂಠದಲ್ಲಿ
ಒತ್ತಿ ಬಂತು ‘ಬಂಡಾಯ’
ಕೆಸರಾದ ಕೈಗಳಿಗೆ
ನೆಲ ಕೇಳುವ ನ್ಯಾಯ.
*****