ಸಾಮರಸ್ಯ
ಅನ್ನದ ತಪ್ಪಲೆಗೂ ನನ್ನ ತಲೆಗೂ ಒಂದೇ ಸಾಮರಸ್ಯ ಇಬ್ಬರೂ ಕುದಿಯುತ್ತೇವೆ ಒಂದು ಒಲೆಯ ಮೇಲೆ ಮತ್ತೊಂದು ಒಲೆ ಇಲ್ಲದೆ ****
ಅನ್ನದ ತಪ್ಪಲೆಗೂ ನನ್ನ ತಲೆಗೂ ಒಂದೇ ಸಾಮರಸ್ಯ ಇಬ್ಬರೂ ಕುದಿಯುತ್ತೇವೆ ಒಂದು ಒಲೆಯ ಮೇಲೆ ಮತ್ತೊಂದು ಒಲೆ ಇಲ್ಲದೆ ****
ಮಗು! ಬೆಳಕು ಎಲ್ಲಿಂದ ಬಂತು? ಕೇಳಿದರು ಗುರುಗಳು ಊದಿ, ದೀಪವಾರಿಸಿ ಕೇಳಿತು ಮಗು ಹೇಳಿ ಗುರುಗಳೇ! ಬೆಳಕು ಹೋಯಿತು ಎಲ್ಲಿಗೆ? *****
ದುಃಖದ ಹೊಳೆಯಲ್ಲಿ ನಗುವಿನ ನಾವೆ ತೇಲುತಿರಲಿ ಅಸೂಯೆ ಕಿಚ್ಚಿನಲಿ ಮೆಚ್ಚುಗೆಯ ಕಿರಣ ಬೆಳಗುತಿರಲಿ *****
ಬುದ್ಧಿವಂತನ ಚಮತ್ಕಾರ ದಂಗುಬಡಿಸೀತು ಹೃದಯವಂತನ ಉಪಕಾರ ಪ್ರತ್ಯುಪಕಾರ ಬಯಸೀತು ಸ್ವಯಂ ಸಹಕಾರ ನೆಮ್ಮದಿಯ ನೆಲೆಯಾದೀತು *****
ಹನಿ ಹನಿಸಿ ಹನಿಗವನ ಮಳೆಯ ಪಾಲಾಯಿತು ಸಿಹಿ ಜೇನ ಇನಿಗವನ ಪ್ರಿಯಗೆ ಮುಡುಪಾಯಿತು ಮಿಣಿ ಮಿಣಿಕಿ, ಮಿನಿ ಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ […]