ಹನಿಗವನ ಕಾಣದ ಕೈ ಜರಗನಹಳ್ಳಿ ಶಿವಶಂಕರ್ September 19, 2022December 28, 2021 ಕಾಣದ ಕೈಯೊಂದು ಕಾಯುತಿದೆ ನಮ್ಮನ್ನು ಅದಕ್ಕೂ ಇವೆ ನಮ್ಮಂತೆ ಐದು ಬೆರಳುಗಳು ಅವು ಪಂಚಭೂತಗಳು ***** Read More
ಹನಿಗವನ ಸತಿ ಶ್ರೀವಿಜಯ ಹಾಸನ September 18, 2022December 29, 2021 ನನ್ನ ಸತಿ ಶಿರೋಮಣಿ ಹೃದಯದರಗಿಣಿ ಕನಸಿನರಾಣಿ ಮನದ ಮನೋನ್ಮಣಿ ಮುತ್ತಿನ ಕಣ್ಮಣಿ ಚೆಲುವಿನ ಖಣಿ ಸರಸದ ರಾಗಿಣಿ ಕೋಕಿಲ ವಾಣಿ ಬಂಗಾರದ ಗಣಿ ಮೂರ್ಖ ಶಿಖಾಮಣಿ ***** Read More
ಹನಿಗವನ ಹಂತಗಳು ಪರಿಮಳ ರಾವ್ ಜಿ ಆರ್ September 17, 2022December 19, 2021 ಹುಟ್ಟುತ್ತಾ ಹಾಲು ಬೆಳೆಯುತ್ತ ಆಲ್ಕೋಹಾಲು ಮುದಿಯಾಗೆ ಕೈಯಲಿ ಕೋಲು ಬೆನ್ನಟ್ಟೆ ಸೋಲು ಮುಖದಲಿ ಜೋಲು ಬಾಳೆಲ್ಲಾ ಗೋಳು ಕೊನೆಗೆ ಸಾವಿನ ಪಾಲು. ***** Read More
ಹನಿಗವನ ಆಧಾರ ಜರಗನಹಳ್ಳಿ ಶಿವಶಂಕರ್ September 12, 2022December 28, 2021 ಬೆಟ್ಟದಿಂದ ಹೆಬ್ಬೆಟ್ಟು ಗಾತ್ರದ ಕಲ್ಲ ತಂದು ಕೊರಳಿಗೆ ಕಟ್ಟಿ ಲಿಂಗ ಎನ್ನುವರು ಗಿಡದಿಂದ ಹಿಡಿ ಹತ್ತಿಯ ತಂದು ಹೊಸೆದು ಒಡಲಿಗೆ ಹಾಕಿ ಜನಿವಾರ ಎನ್ನುವರು ಬೆಟ್ಟ ಎಷ್ಟು ಲಿಂಗಗಳ ಗಿಡ ಎಷ್ಟು ಜನಿವಾರಗಳ ತಮ್ಮೊಳಗೆ... Read More
ಹನಿಗವನ ಕರಾಮತಿ ಶ್ರೀವಿಜಯ ಹಾಸನ September 11, 2022December 29, 2021 ವಾಹನ ಚಾಲಕರಿಗೀಗ ಬೇಕು ವಿಶೇಷ ಪರಿಣತಿ ಹೊಂಡಗಳ ನಡುವೆ ರಸ್ತೆಯ ಹುಡುಕಿ ನಡೆಸುವ ಕರಾಮತಿ ***** Read More
ಹನಿಗವನ ಗುಟ್ಟು ಪರಿಮಳ ರಾವ್ ಜಿ ಆರ್ September 10, 2022December 19, 2021 ಗುಣ, ಅವಗುಣಗಳ ಅಮದು ರಫ್ತು ಬಾಳ ಬಾಳುವ ಗುಟ್ಟು ಶಿಸ್ತು. ***** Read More
ಹನಿಗವನ ಗುಣ ಜರಗನಹಳ್ಳಿ ಶಿವಶಂಕರ್ September 5, 2022April 25, 2022 ಕಲ್ಲ ಕಡೆದು ಕೂರಿಸಿ ಹಾಲು ಮೊಸರು ತುಪ್ಪ ಸುರಿದು ಅಭಿಷೇಕ ಮಾಡಿದರೆ ಕಳೆದು ಹೋಗಬಲ್ಲುದೆ ಕಲ್ಲಿನೊಳಗಿನ ಕಿಚ್ಚು ಮೈಗೆ ತೊಡಿಸಿದರೆ ವಜ್ರ ವೈಡೂರ್ಯ ಮಣ ಆಭರಣ ಬದಲಾಗಬಲ್ಲುದೆ ಒಡಲೊಳಗೆ ಹುಟ್ಟಿ ಬಂದಂಥ ಕೆಚ್ಚು ***** Read More
ಹನಿಗವನ ನಾಟಕ ಪರಿಮಳ ರಾವ್ ಜಿ ಆರ್ September 3, 2022December 19, 2021 ಕಣ್ಣಿನ ಪರದೆ ಒಳಗೊಂದು ಬಯಲಾಟ ಹೃದಯತೆರೆ, ಒಳಗೊಂದು ಕರುಳಾಟ ಬಾಳಲ್ಲಿ ಮಗದೊಂದು ಗೋಳಾಟ. ***** Read More
ಹನಿಗವನ ಬ್ರಹ್ಮಾಸ್ತ್ರ ಶ್ರೀವಿಜಯ ಹಾಸನ September 1, 2022March 3, 2022 ನಲ್ಲೆ ನಿನ್ನ ಕುಡಿನೋಟದ ಮೋಹಕ ಮಿಂಚು ಕಂಡೆ ನಾ ಅದರಲ್ಲಿ ನೂರಾರು ಸಂಚು ಅದುವೇ ನಿನ್ನಯ ಪಾಶುಪತಾಸ್ತ್ರ ನಲ್ಲನ ಶರಣಾಗಿಸುವ ಬ್ರಹ್ಮಾಸ್ತ್ರ ***** Read More
ಕವಿತೆ ಅಂಬನೀ ದಯಮಾಡೆ ವೃಷಭೇಂದ್ರಾಚಾರ್ ಅರ್ಕಸಾಲಿ August 29, 2022January 22, 2022 ಅಂಬನೀ ದಯಮಾಡೆ ಅಂಬುಜ ಲೋಚನೆ ತುಂಬಿದೆ ನಿನ್ನಾ ಬಿಂಬವು ಸುತ್ತಲು ಇಂಬುದೋರಮ್ಮ ನನ್ನೊಳಗು || ಪ || ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ ಚೊಕ್ಕಚಂದ್ರನ ತಿಲಕ ಹಣೆಯಲ್ಲಿ ಅಕ್ಷಯ ಪ್ರಭೆಯನು ಹರಿಸುವೆ ತಾಯೆ ಪುಷ್ಕಳ... Read More