
ಬೋಧಿ ವೃಕ್ಷದ ಚಿತ್ರ ಬರೆದವರೆಲ್ಲ ಬುದ್ಧರಲ್ಲ ಹೆಚ್ಚೆಂದರೆ ಸಿದ್ದಾರ್‍ಥರು! ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ. ಯಾಕೆಂದರೆ- ಬುದ್ಧರಾಗುವವರ ಬಾಯಲ್ಲಿ ನರಿ, ಮರಿಹಾಕುವುದಿಲ್ಲ. ನರಿ ನಾಲಗೆಯಲ್ಲಿ ನಯ...
ಬೇರು ಕಿತ್ತ ಮರ, ನಾರು ನನ್ನ ನರ ಹಗ್ಗವಾಯಿತು ನಿಮಗೆ ಉರುಳು ನನಗೆ ಸಾವ ನೇಯುವ ನೂಲು, ಭಾವ ಬತ್ತಿದ ಮಾಲು ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ. ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು ಕಾಲು ಒತ್ತುವ ಕಾಲ-ಎಲ್ಲ ನಾನು ಹುಟ್ಟು ಹಬ್ಬದ ಕಾಳು...
ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು. ಬೆವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು. ಅತ್ತ ಬೆಟ್ಟ ಇತ್ತ ನೀರು ನಡುವೆ ನಗಲು ಎದ್ದವು- ಮೂಳೆಗಳೇ ಮರಗಳಾಗಿ ಆಸೆ ಹಸಿರು ಎಲೆಗಳು. ಕನಸು ಬಿರಿವ ಹೂವು- ಕಾಯ...
ಕತ್ತಲೆಲ್ಲ ಬೆತ್ತಲಾಗಿ ಬೆತ್ತಲೆಲ್ಲ ಬೆಳಗಾಗಿ ಕೆಂಪಾಗಲಿ ಕಪ್ಪು ನೆಲ. ಛಿದ್ರ ಛಿದ್ರವಾಗಲಿ ಬೇರು ಬೂದಿಯಾಗಲಿ ತುಳಿದು ನಗುವ ಜಾಲ. ಗುಡಿಸಲಿನ ಗರಿಗಳಿಂದ ಮನೆ ಮನೆಯ ಮನಸಿನಿಂದ ಹಾದಿ ಹೂಲದ ಎದೆಗಳಿಂದ ಹುಟ್ಟಿ ಬರಲಿ ಇಲ್ಲಿ ಹೋರಾಟದ ಹಾಡು. ಅಸ್ಪೃಶ...
ಹೊರಗೆ ಹತ್ತಿತು ಬೆಂಕಿ ಒಳಗೆ ತುಂಬಿತು ಹೂಗೆ ಒಳಗು-ಹೊರಗು ಬೇರಾಯಿತು ಹೇಗೆ? ಹೊರಗಡೆ ತೋಡುವ ವೈರದ-ಪಾಯಕೆ ಬೆಳೆಯಿತು ಒಳಗಡೆ ಉದ್ದನೆ ಗೋಡೆ! ಭೂಪಟ ಗೆರೆಗಳು ಭೂಮಿಗೇ ಅಲ್ಲ ಗರಗಸವಾಗಿವೆ ಮನಸಿನಲಿ ಜಾಲದ ಜಾತಿ ಸೀಳಿದ ವರ್‍ಗ ಸಲಗದ ಸದ್ದು ಸೆಣಸಿನಲ...
ಒಪ್ಪೊತ್ತಿನ ಊಟದಲ್ಲಿ ಹರಕು ಬಟ್ಟೆ ಬೆಳಕಿನಲ್ಲಿ ಅಳುವಿನಲ್ಲಿ ನಗುತ ನಾನು ಸೆಳವಿನಲ್ಲಿ ತೇಲುತ- ನೆಲವ ನೆಚ್ಚಿ ಇದ್ದೆನು ಬೆವರಿನಲ್ಲಿ ಬಾಳುತ ಒಡಲ ಸುಖ, ಪ್ರೀತಿ ಮಾತು ಬರುವುದೆಂದು ಕಾಯುತ. ಮಹಲಿನಿಂದ ಕುರ್ಚಿಯಿಂದ ಭೂಮಿಯೊಡಲ ಬಿರುಕಿನಿಂದ ಎದ್ದ...
ಸಿಡಿದು ಹೋಗಲಿ ತಾರೆ ನೆಗೆದು ಬೀಳಲಿ ಚಂದ್ರ ಹೂತು ಹೋಗಲಿ ಹಗಲು ಬಂದೀತು ನಮಗೆ ಹೊಸ ಹೊತ್ತು. ಕಗ್ಗತ್ತಲ ಕೋಟೆಯಲ್ಲಿ ಹೊಸ ಆಸೆಯ ಹುಟ್ಟು. ಕತ್ತು ಮುರಿಯುವ ಕತ್ತಲಿಗೆ ಇಟ್ಟೇವು ಭಗ್ಗೆನ್ನುವ ಬೆಂಕಿ ಬೆಂದು ಹೋಗಲಿ ಬೂದಿಯಾಗಲಿ ಸೆರೆ ಕುಡಿಸಿದ ಸಾಧನ...
ಬಡವರಾದೆವು ನಾವು ಬಂಧುಗಳು ಯಾರುಂಟು? ನಾವು ಬಸಿದಾ ಬೆವರು ಯಾರ ಹೊಟೇಲುಂಟು ? ಕಣ್ಣ ಹನಿ ಹರಿಸಿದೆವು ಮಗುವಂತೆ ಬೆಳಸಿದೆವು ಕಂಡೋರ ಮನೆಗೆಲ್ಲ ಕೊಟ್ಟು ಬಂದೆವಲ್ಲ ತಲೆ ಮ್ಯಾಲೆ ಸಾಲ ಹೊತ್ತು ತಂದೆವಲ್ಲ. ಮೂಳೆ ಮೂಳೆಯ ತೇದು ಬೆಳೆಸಿದೆವು ನಾವು ನಮ್...














