ನಿಸರ್‍ಗ

ನಿಸರ್‍ಗವೆಂದರೆ ನನಗೆ ತುಂಬಾ ಇಷ್ಟ.

ಆದರೆ ನಾನು ಹಿಗ್ಗುತಿಲ್ಲ-
ಮೊಗ್ಗು ಮೌನಕ್ಕೆ, ಮಾತು ಹೂವಿಗೆ
ಹಸಿರು ಹೃದಯಕ್ಕೆ, ಸೂರ್‍ಯ ಉದಯಕ್ಕೆ.

ನಾನು ಹಿಗ್ಗುತ್ತೇನೆ-
ಮಾವು ಮಾವಾಗಿ ಬೇವು ಬೇವಾಗಿ
ಹಸಿರು ಹಸಿರಾಗಿ ಬೋಳು ಬೋಳಾಗಿ
ಕಾಣುವ ಸಹಜ ಸಾಚಾತನಕ್ಕೆ.

ನಾನು ಆತಂಕಿಸುತ್ತೇನೆ-
ಹಸಿರು ಮುತ್ತೈದೆ ಮರ ನೋಡುತ್ತ
ವಿಧವೆ ಬೋಳು ಮರ ನೆನೆದು.

ನಾನು ಭಯ ಪಡುತ್ತೇನೆ-
ಮೂರ್‍ತ ಪೊದೆಯ ಸರಸರ ಸದ್ದಿನಲ್ಲಿ
ಅಮೂರ್‍ತ ಹಾವು ನೆನೆದು.

ನಾನು ಬೆವರೊಡೆಯುತ್ತೇನೆ-
ಮರಗಿಡಗಳ ತಂಪು ತಂಗಾಳಿಯಲ್ಲಿ
ಕಾದ ನೆಲದ ನಿಟ್ಟುಸಿರ ನೆನೆದು.

ಹಿಗ್ಗು, ಆತಂಕ, ಭಯ, ಬೆವರು, ನೆರೆದು
ನನ್ನೊಳಗೆ ಮರುಹುಟ್ಟಿನ ಕಷ್ಟ-
ಆದ್ದರಿಂದ ಈ ನಿಸರ್‍ಗ, ನನಗೆ ತುಂಬಾ ಇಷ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗುನಗುತ್ತಾ ದಿನವನ್ನು ಸ್ವಾಗತಿಸಿ
Next post ಶಿಲೆಗಳಾಗಬೇಡಿ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys