Home / Kannada

Browsing Tag: Kannada

ದುರಂಧರಾ ಇದು ರಣದ ಐಸುರ || ಪ || ಘನಸಮರ ನಡೆದಿತು ಚಿನುಮಯ ಶರಣರಿಗಿಂದು ಭಟರ ಹಾರಗಳು ಭಟರ ವೈರಿಗಳು ಹಟದಿಂದ ಹೊಡೆದ ಸಂಕಟ ಜಯಿಸುವಂಥ || ೧ || ಧರಿಭಾರವನು ಧರಿಗಿಳಿಸಿದ ತಾನು ಗಿರಿಯ ಮೇದಿನಿಯಿಂದ ಅರಸರಿಗಿದು ಬಲಾ ಮೇದಿನಿಗಧಿಕ ಆದಿ ಶಿಶುನಾಳಧೀ...

ಮರುಕಕ್ಕೆ ಪ್ರೇಮಕ್ಕೆ ಮುಚ್ಚಿದೆ ಬಾಗಿಲು ಗಾಳಿ ಆಡದ ಕೋಣೆ ಬಿಟ್ಟ ಉಸಿರೇ ಮತ್ತೆ ಒಳಹೊಕ್ಕುವ ಸರಾಗ ಸರೋಗ ವಾತಾಯನ ವ್ಯವಸ್ಥೆ ಅನುತಾಪ ಅನುಕಂಪಕ್ಕೆ ಭದ್ರ ಬಂದೋಬಸ್ತ್ ಬೀಗ ತೆರೆಯದ ಕಿಟಕಿಗಳೊಳಗೆ ಕೊಳೆಯುವ ರಾಜ ವೈಭೋಗ ಶಿಣ್ಣು, ಬೇಡು, ಗಂಟೆಗಳ ಸಜ...

ಹಸಿವೆ-ನೀರಡಿಕೆಯಲಿ ಜೀವಂತ ಹೆಣವಾಗುತ ವಂಚನೆಗೆ ಬಲಿಯಾಗಿ ಬಳಲುತ… ಬಿದ್ದಿಹರು ಜಾತಿ-ಧರ್ಮಗಳ-ಭೇದದಲಿ ದ್ವೇಷ-ಬೆಸೆದು ಭಗ್ನಗೊಳಿಸುತ… ಬಾಂಧವ್ಯದ ಹಸಿರು ಬಳ್ಳಿಯ ಕಡಿದು ಬರಡುಗೊಳಿಸಿಹರು ತಾಳ್ಮೆ-ನೋವುಂಡ ಜೀವಕ್ಕೆ ಸಹನೆ-ಮೀರಿದ ಬದು...

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಕ.ಸಾ.ಪ.ದಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ಮಡಿಕೇರಿಯಲ್ಲಿ ಕಾದಂಬರಿಕಾರ ಭಾರತೀಸುತರ ಸಂಸ್ಮರಣ ಕಾರ್ಯಕ್ರಮವನ್ನು ೨೦೦೯ರ ಅಕ್ಟಟೋಬರ್‌ ೧೫ ರಂದು ಇರಿಸಿಕೊಂಡಿದ್ದರು. ಅದರಲ್ಲಿ ಭಾರತೀ ಸು...

ಸಂಗರ ಗೆಲಿದಾ ಯಜಿದಾ ಸಂಗರದಿ ಅಂಗನಿಗೆ || ಪ || ಅಂಗನಿಗೆ ಸೋಜಿಗದಿ ಕಾಶೀಮಶಹಾ ಶೃಂಗರದಿ ||೧|| ಜವಾಜಿ ರಥಗಳ ತಯ್ಯಾರಮಾಡಿ ಅಜಹರಿಹರ ಸುರರು ಸ್ವರ್ಗದಲಿ ಕೊಂಡಾಡಿ || ೨ || ಧಾಮಶಪುರದ ಸೀಮಿಗೆ ತಾ ಆರಾಮದಿ ಈ ಭೂಮಿಗೆ ಶಿಶುನಾಳಧೀಶನ ದಯದಿ || ೩ |...

ನಿನ್ನ ತಾಳಕ್ಕೆ ತಕ್ಕಂತೆ ಕುಣಿಯೋದಕ್ಕೆ ನಾವು ತಯಾರಿಲ್ಲ. ನೀನು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಕೊಟ್ಟದನ್ನ ತಿನ್ಕೊಂಡು ಇಲ್ಲೇ ಬಿದ್ದಿರು. ನಮ್ಮ ಮಾತು ಧಿಕ್ಕರಿಸಿ ಹೋಗ್ತಿನಿ ಅಂಥ ನಿರ್ಧಾರ ಮಾಡಿದ್ರೆ ಈಗ್ಲೇ ಹೊರಡ್ಬೊಹುದು. ಇನ್ನೆಂದಿಗೂ ಇ...

ಬಂದಾನೋ ಹನೀಪನೋ ಸುಂದರನೋ || ಪ || ಬಂದು ಸಮರದೊಳಗೆ ದು೦ದುಕಾಳಗಮಾಡಿ ಕೊಂದಾನೋ ಯಜೀದರ ಸ್ಯೆನ್ಯವನು || ೧ || ಕೊಂದ ಹನೀಪನ ಕೊಲ್ಲದೆ ಹೋದರೆ ಇಂದು ಯಜೀದನೆಂಬ ಹೆಸರ‍್ಯಾತಕೆಂದು || ೨ || ಅಂದು ಯಜೀದನು ಹನೀಪನ ಹುಡಕುತ ಬಂದಾನೋ ರಣದೊಳಗೆ ಅವನು ||...

ನಡಿದಾ ಸಮರದಿ ಮಡಿದಾ ಕಾಸೀಮದೊರಿ || ಪ || ಸುತನೇ ನಿನ್ನ ಹತಮಾಡಿದವರಿಗೆ ಹಿತವಾಯ್ತೇ ಹಿತವಾದ ಕಾಸೀಮ ಮನಕೊಪ್ಪುವ ಬಾಲ || ಅ. ಪ. || ಹಗಲು ಇರುಳು ನಿನ್ನ ಮರೆಯಲಾರೆನು ಮಗನ ಮುಖವ ತೋರೋ ಅಗಲಿ ಸಹಿಸಲಾರೆನು || ೧ || ಅಗ್ನಿ ಕುಣಿಗೆ ದೇಹ ಮಗನೇ ಚಲ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...