ನಡಿದಾ ಸಮರದಿ ಮಡಿದಾ ಕಾಸೀಮದೊರಿ || ಪ ||

ಸುತನೇ ನಿನ್ನ ಹತಮಾಡಿದವರಿಗೆ ಹಿತವಾಯ್ತೇ
ಹಿತವಾದ ಕಾಸೀಮ ಮನಕೊಪ್ಪುವ ಬಾಲ || ಅ. ಪ. ||

ಹಗಲು ಇರುಳು ನಿನ್ನ ಮರೆಯಲಾರೆನು
ಮಗನ ಮುಖವ ತೋರೋ
ಅಗಲಿ ಸಹಿಸಲಾರೆನು || ೧ ||

ಅಗ್ನಿ ಕುಣಿಗೆ ದೇಹ
ಮಗನೇ ಚಲ್ಲಿದಿಯಾ
ಸುಜ್ಞಾನಿ ಗುರುಶಿಶುನಾಳಧೀಶನಗಲಿದಿಯಾ || ೨ ||
*****