ಹೂಮಳೆ

ತುಂಬಿ ಬಂದಿದೆ ಹೃದಯವಿಂದು ನಿನ್ನ ನೆನಪೇ ತಂದಿದೆ |
ಅಲೆಗಳಿಲ್ಲದೆ ಪ್ರೇಮಗಂಗೆ ಶಾಂತವಾಗಿ ಹರಿದಿದೆ || ಪ ||

ಹುಣ್ಣಿಮೆಯ ಈ ಶುಭ ರಾತ್ರಿ ಹಗಲಿನಂತೆ ಬೆಳಗಿದೆ |
ಧರೆಗೆ ಇಳಿದಾ ಚಂದ್ರ ಕಾಂತಿ ಹಾಲಿನಂತೆ ಹರಡಿದೆ || ೨ ||

ಜೋಡಿ ಹಂಸದ ಪುಟ್ಟ ದೋಣಿ ತೇಲಿ ತೇಲಿ ಸಾಗಿದೆ |
ನವ ವಸಂತದ ಬಾಳ ನೌಕೆ ಒಲುವೆ ಇಂದಲೆ ಚಲಿಸಿದೆ || ೩ ||

ಗಿರಿಗಾಡಿನ ವನಸಿರಿ ಹಚ್ಚಹಸುರನೆ ಹಾಸಿದೆ |
ತಂಪನೆರೆಯುತ ತಂಗಾಳಿ ಶ್ವೇತ ಹಿಮವನೆ ಹೊದಿಸಿದೆ || ೪ ||

ನೋವನೆಲ್ಲವ ಮರೆಸಿ ಒಲವು ಹೂಮಳೆಯನು ಸುರಿಸಿದೆ |
ನಿನ್ನ ಪ್ರೇಮದ ಅಮೃತ ಧಾರೆ ಇಳೆಗೆ ಸಗ್ಗವ ಇಳಿಸಿದೆ || ೫ ||

ತುಂಬಿ ಬಂದಿದೆ ಹೃದಯವಿಂದು ನಿನ್ನ ನೆನಪೇ ತಂದಿದೆ |
ಅಲೆಗಳಿಲ್ಲದೆ ಪ್ರೇಮಗಂಗೆ ಶಾಂತವಾಗಿ ಹರಿದಿದೆ || ಪ ||
*****
೧೦-೦೧-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ ಮಂಥನ ಸಿರಿ – ೬
Next post ಬದರಿಕಾಶ್ರಮದಲ್ಲಿ ಒಂದು ಬೆಳಗು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…