ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ
ಕದನ ಬೆಳಸಿತ್ತರಿ ಕರ್ಬಲ ಜವದಿನ   ||ಪ||

ಗುದ್ದಲಿ ಹಾಕುವರೇನು ಈ ನೆಲಕ
ಸಧ್ಯಕೆ ತಡವ ಮಾಡುವದು ಇನ್ನ್ಯಾಕೋ      ||೧||

ಡೋಲಿ ಕಟ್ಟುವರೇನು ಕಾರಣ
ಡೋಲ್ಯಾಗ ದೇವರಿಡುವರೇನು ಕಾರಣ         !|೨||

ಫಕ್ಕೀರರಾಗುವ ಬಗಿ ತಿಳಿಸೆನಗ
ಭಿಕ್ಷಾ ಬೇಡುವದ್ಯಾಕೋ ಮನಿ ಮನಿಗೆ         ||೩||

ಶರಬತ್ತು ಅಂಬಲಿ ರೋಟು ಚೊಂಗೆ
ಕೂಡಿಕೊಂಡು ತಿಂದಾವೋ ಮಂಗ್ಯಾ              ||೪||

ಪದ ಹಾಡುವದಿದು ಮೂರು ದಿನ
ಶಿಶುನಾಳಧೀಶನ ಕವನ                ||೫||

*****