ಬಂದಾನೋ ಹನೀಪನೋ ಸುಂದರನೋ

ಬಂದಾನೋ ಹನೀಪನೋ ಸುಂದರನೋ || ಪ ||

ಬಂದು ಸಮರದೊಳಗೆ ದು೦ದುಕಾಳಗಮಾಡಿ
ಕೊಂದಾನೋ ಯಜೀದರ ಸ್ಯೆನ್ಯವನು || ೧ ||

ಕೊಂದ ಹನೀಪನ ಕೊಲ್ಲದೆ ಹೋದರೆ
ಇಂದು ಯಜೀದನೆಂಬ ಹೆಸರ‍್ಯಾತಕೆಂದು || ೨ ||

ಅಂದು ಯಜೀದನು ಹನೀಪನ ಹುಡಕುತ
ಬಂದಾನೋ ರಣದೊಳಗೆ ಅವನು || ೩ ||

ಇಬ್ಬರಿಗೂ ಕಡು ಕಾಳಗವಾಯಿತು
ಮಡಿದನೋ ಹನೀಪನೋ ಅವನು || ೪ ||

ದೇಶದೊಳಗೆ ಶಿಶುನಾಳಧೀಶನ ಕರುಣದಿ
ಮೋಸವಾಯಿತೋ ಅವಗೆ ಆವಾಗ || ೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಡಿದಾ ಸಮರದಿ ಮಡಿದಾ ಕಾಸೀಮದೊರಿ
Next post ಒಲವೇ… ಭಾಗ – ೭

ಸಣ್ಣ ಕತೆ