
ಬೆರಳು ಬೆರಳುಗಳಲ್ಲಿ, ಕೊರಳು ಕೊರಳಿನಲಿರಿಸಿ, ಸುರುಳುರುಳಿ, ಸುತ್ತಿರುವ ಬಳ್ಳಿಗಳ ಹಾಗಾಗಿ, ಅರಳಿಸುತಲೊಂದೊಂದೆ ಅವಳಿ ಹೂ, ದಿವ್ಯತರ ದೃಷ್ಟಿಯನು ಪಡೆಯುವಂತೆ, ಭರದಿ ಮೈಮೇಲೆಲ್ಲ ಕಣ್ಣಾಗೆ, ಆಗ ಮೈ- ಮರೆತು ನೋಡುತ್ತ ನಿಲ್ಲೋಣ ಸ್ವರ್‍ಲೋಕವನು, ಹರ...
ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು; ಫಲ ಏನೊ ? ಬಳೆಯುತಿದೆ ಬಯಲ ಬಸಿರು. ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು, ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು. ಗಾಳ ಗೋಳಿಡುವಂತೆ ಭೋರಾಡುತಿಹುದು; ಬಾಳುವೆಯೆ ಹೊಸದೊಂದು ಒಗಟವಾಗಿಹುದು. ನೆಲೆಯರಿ...
ಇಂದರ ಹೂ ಚಂದರ ಹೂ ಚೆಂದ ಚೆಂದದ ಹೂ ತಂದು ಇಟ್ಟೇನೀಗ ನಿನಗಂತ, ಸುಂದರಿ. ಕಣ್ಣು ಸೋತ್ಯು ಹಾದೀ ನೋಡಿ; ಮನ ಸೋತ್ಯು ಚಿಂತೀಮಾಡಿ; ನಾಲ್ಗಿ ಸೋತ್ಯು ಹಾಡಿಹಾಡಿ; ನಿನ ಹಾಡು, ಸುಂದರಿ ಚಿಗರಿ ಸಂಗಾತ ಆಟ ಎಡಕ ಬಲಕ್ಕ ನೋಟ ಬರಬ್ಯಾಡ ಮಾಡುತ ಬ್ಯಾಟಾ ಬೇಗ ...
ಮೋರೆ ಮರೆಯಾಯ್ತಿನ್ನು ಮೇಲೆ, ಕಣ್ಣುಗಳೆಂತು ಯಾರಿಗೂ ಮೋಹನವ ಮಾಡಲಾಪವು! ಕಂದ ಕಾರಿಬಾರಿಗಳಂತೆ ಸರಿಮಾಡಿದ ಸುಖವು ಎಲ್ಲಡಗಿತೀಗ ಎಲ್ಲ? ನಾರಾಯಣಾ ! ಅಹಹ ! ಎಂಥ ಕೋಮಲ ಜೀವ! ವಾರಿಜದವೋಲ್ ಮಂಜಿನಿಂದ ಮರಣವು ಬಂತೆ ! ಪಾರಿಜಾತದ ಹೂವಿನಂತೆ ಮುಟ್ಟಿದ ಒ...














