ವಿಜಯ ವಿದ್ಯಾರಣ್ಯ ನೀನೆ ಧನ್ಯ ||
ಮೈಯೆಲ್ಲ ಕಣ್ಣುಳ್ಳ ಮುಂದಾಳು ಬೇಕು|
ಕುರುಡುಬಳ್ಳಿಯ ಮೆಳ್ಳ ನಾಯಕರು ಸಾಕು ||
ಈಸಗುಂಬಳ ಜೊತೆಯು ಬೇಕು, ಈಸುವರೆ, !
ಪಾತಾಳಕೊಯ್ಯುವಾ ಕಲ್ಲನರಸುವರೇ ? ||
ಯೋಗಿ, ನಿನ್ನೊಲು ನೀನು ! ದೊರೆಯನನ್ಯ |
ವಿಜಯ ವಿದ್ಯಾರಣ್ಯ ನೀನೆ ಧನ್ಯ ||
ಬೀಜ ಬಿತ್ತುವರುಂಟು; ಬೆಳೆಸಿಕೊಂಡವರು |
ಉಂಟು ! ಜನರೇಸು ಆ ಫಲವನುಂಡವರು ? ||
ರಾಷ್ಟ್ರ ಪ್ರಪಂಚವನ್ನು ಗೈದ ಸಂಸಾರಿ|
ನಮೊ ನಮೋ ನಿನಗೆಂಬೆ ನೂರುಬಾರಿ ||
*****


















