ಒಮ್ಮೆ ಗುರುಗಳು ಶಿಷ್ಯಂದಿರನ್ನು ಕರೆದು ಕೇಳಿದರು. “ಸಾವಿನ ಸಂಗಾತಿ ಯಾರು?” ಎಂದು.
ಒಬ್ಬ ಶಿಷ್ಯ ಹೇಳಿದ- “ಸತ್ಯ ಧರ್ಮ’ ಎಂದು.
ಇನ್ನೊಬ್ಬ ಹೇಳಿದ- “ಬೆಳಕು ಕತ್ತಲು, ಹಗಲು, ರಾತ್ರಿ” ಎಂದು.
ಒಬ್ಬ ಬುದ್ದಿವಂತ ಶಿಷ್ಯ ಹೇಳಿದ, “ಅದು ನಮ್ಮ ಬಂಧುಬಳಗ.” ಎಂದು.
ಇನ್ನೊಬ್ಬ ಹೇಳಿದ “ದೇಹ” ಎಂದು.
“ಇದು ಸ್ಥೂಲ ಪ್ರಕೃತಿಯಾದ ನಮ್ಮ ದೇಹಕ್ಕಾಯಿತು. ನಮ್ಮನ್ನು ಬಿಟ್ಟೂ ಬಿಡದೆ ಹಿಂಬಾಲಿಸಿವ ಸಂಗಾತಿ ಯಾರು?” ಎಂದರು ಗುರುಗಳು.
“ನೀವೇ ಹೇಳಿಬಿಡಿ, ಗುರುಗಳೇ” ಎಂದ ಮತ್ತೊಬ್ಬ ಶಿಷ್ಯ.
“ನಮ್ಮ ನೆರಳು, ನಮ್ಮ ಪ್ರಾಣ, ನಮ್ಮ ಆತ್ಮ” ಎಂದರು ಗುರುಗಳು.
*****


















