Home / Parimala Rao

Browsing Tag: Parimala Rao

ಒಂದು ದೊಡ್ಡ ಬೌದ್ಧ ವಿಹಾರ. ಅಲ್ಲಿ ಅನೇಕ ಬೌದ್ಧ ಭಿಕ್ಷುಗಳ ವಾಸ. ಅಲ್ಲಿಗೆ ಒಬ್ಬ ಶಿಲ್ಪಿ ದಿನವೂ ತಾನು ಕೆತ್ತಿದ ಬುದ್ದನ ಶಿಲ್ಪವನ್ನು ಒಬ್ಬ ಭಿಕ್ಷುವಿಗೆ ತೋರಿಸಿ, ಕೊಂಡುಕೊಳ್ಳಲು ಕೇಳಿಕೊಳ್ಳುತಿದ್ದ. ಭಿಕ್ಷು ದಿನವೂ ಅದರಲ್ಲಿ ಮುಖ್ಯವಾದುದನ್ನ...

ಮಣ್ಣಿನಲ್ಲಿ ಆಟಿಕೆಗಳನ್ನು ಮಾಡುವ ಒಬ್ಬ ಹೆಂಗಸು-ಜೇಡಿಮಣ್ಣಿನಲ್ಲಿ ಅನೇಕ ಬೌದ್ಧ ಪ್ರತಿಮೆಗಳನ್ನು ಮಾಡಿ ಮನೆಮನೆಗೆ ಬಂದು ಮಾರುತ್ತಿದ್ದಳು. ಮಕ್ಕಳು ಅವನ್ನು ಕೊಂಡು ಆಡುತ್ತಾ, ಓಡುತ್ತ, ಒಡೆದು ಹಾಕುತ್ತಿದ್ದರು. ಆಕೆ ಮರುದಿನ ತಪ್ಪದೇ ಬಂದು ಒಡೆದ...

ಒಬ್ಬ ಶಿಷ್ಯ ಹಸಿ ಜೇಡಿ ಮಣ್ಣಿನಲ್ಲಿ, ಬುದ್ಧನನ್ನು ಮಾಡಿ ಹಸಿವಿಗ್ರಹವನ್ನು ಪೂಜಿಸಿ, ಜಲ ಧಾರೆಯಿಂದ ಅಭಿಷೇಕ ಮಾಡುತ್ತಿದ್ದ. ಕೊಡಗಟ್ಟಲೆ ನೀರು ಸುರಿದಾಗ, ಹಸಿಮಣ್ಣಿನ ವಿಗ್ರಹ ಕರಗಿ ಹರಿದು ಹೋಗುತ್ತಿತ್ತು. ಇದನ್ನು ನೋಡುತ್ತಿದ್ದ ಗುರುಗಳು &#82...

ವಸಂತ ಕಾಲ. ಎಲ್ಲೆಲ್ಲೂ ಚೆಲವು, ಶಿಷ್ಯ ಗುರುಗಳಲ್ಲಿಗೆ ಬಂದು “ನನಗೆ ಝನ್ ಬೋಧಿಸಿ” ಎಂದು ಬಿನ್ನವಿಸಿಕೊಂಡ. ಗುರುಗಳು ಹೇಳಿದರು- “ಎಲ್ಲೆಲ್ಲೂ ಹೂವು ಅರಳಿದೆ. ಚೆಲುವು ತುಂಬಿದೆ. ಗಾಳಿಯಲ್ಲಿ ಗಂಧ ಉಯ್ಯಾಲೆಯಾಡುತ್ತಿದೆ. ದುಂಬಿ ಹಾಡುತ್ತಿದ...

“ಸತ್ಯ ದರ್ಶನ ಮಾತಿನಲ್ಲೇ?- ಇಲ್ಲಾ ಮೌನದಲ್ಲೇ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ. “ಸತ್ಯಕ್ಕೆ ಕಿವಿ ಬೇಕೆ? ಸತ್ಯಕ್ಕೆ ಬಾಯಿ ಬೇಕೇ?” ಎಂದು ಮತ್ತೆ ಸಂದೇಹದಿಂದ ಕೇಳಿದ. “ಸತ್ಯಕ್ಕೆ ಹೃದಯ ಒಂದೇ ಸಾಕು” ಎಂದರು ಗುರುಗಳು. “ಅದು ಹೇಗ...

“ಗುರುಗಳೇ! ನಾಯಿ, ಬೆಕ್ಕು, ಇಲಿ, ಹಸು ಮುಂತಾದ ಪ್ರಾಣಿಗಳಲ್ಲಿ ದೈವ ಹೇಗೆ ಇರುತ್ತದೆ? ಹುಲಿ, ಆನೆ, ಕರಡಿ, ಸಿಂಹ ಮುಂತಾದುವುಗಳಲ್ಲಿ ದೈವ ಯಾವ ರೀತಿ ಇರುತ್ತದೆ? ಗಿಡ, ಮರ, ಹೂವು, ಕಾಯಿ, ಹಣ್ಣು, ಹಕ್ಕಿ, ಚುಕ್ಕಿ, ಭೂಮಿ, ಆಕಾಶ ಈ ಎಲ್ಲದ...

“ಗುರುಗಳೇ! ನೀವು ಏಕೆ ಈ ಪರ್ವತ ಶಿಖರದಲ್ಲಿ ವಾಸವಾಗಿದ್ದೀರಿ? ಇಲ್ಲಿ ಒಬ್ಬರೆ ಇರಲು ನಿಮಗೆ ಆಸರೆ ಯಾರು?” ಎಂದು ಕಳಕಳಿಯಿಂದ ಕೇಳಿದ, ಅಲ್ಲಿ ಹಾದು ಬಂದ ಒಬ್ಬ ಸಾಧಕ. “ಇಲ್ಲಿ ನನಗೆ ಸಾಕಷ್ಟು ಆಸರೆ ಇದೆ. ಬೆಳಗಿನಲ್ಲಿ ಸೂರ್ಯನ ಆಸರೆ, ರಾತ್ರಿಯಲ್ಲ...

ಗುರುಗಳು ಒಮ್ಮೆ ಶಿಷ್ಯ ವೃಂದವನ್ನು ಕರೆದು “ಮನವನ್ನು ಬರಿದು ಮಾಡಿಕೊಂಡು ಬನ್ನಿ.” ಎಂದು ಕಳುಹಿದರು. ಒಬ್ಬ ಶಿಷ್ಯನೆಂದ “ಗಾಳಿ ಸ್ನೇಹಿತ, ನನ್ನ ಮನವನ್ನು ಗುಡಿಸಿ ಖಾಲಿ ಮಾಡಿಬಿಡುವ ನನಗೇನು ಯೋಚನೆ ಇಲ್ಲ” ಎಂದ. ಮತ್ತೊಬ್ಬ ಶಿಷ್ಯ &#8220...

ಗುರುಗಳೇ! ”ನನ್ನ ಮನವನ್ನು ಮೋಡದೊಡನೆ ತೇಲಿಬಿಟ್ಟಿರುವೆ” ಎಂದ ಶಿಷ್ಯ. “ಮೋಡವು ಇನ್ನು ಕೆಲವೇ ಕ್ಷಣಗಳಲ್ಲಿ ತನ್ನ ಮನದ ಆರ್ದತೆಯನ್ನೆಲ್ಲಾ ಮಳೆಯಾಗಿ ಚೆಲ್ಲಿ ಬರಿ ಕೊಡವಾಗಿ ಶೂನ್ಯ ತುಂಬಿಕೊಳ್ಳುತ್ತದೆ. ಆಗ ನೀನು ತೇಲಿಬಿಟ್ಟಿರುವ ನಿನ್ನ ಮ...

ಗಣಿಯಿಂದ ತೆಗೆದ ಒಂದು ಚಿಕ್ಕಬಂಡೆಯನ್ನು ಕೈಯಲ್ಲಿ ಹಿಡಿದು, ಗುರುಗಳು ಕೇಳಿದರು. ಶಿಷ್ಯರಲ್ಲಿ ಒಂದು ಪ್ರಶ್ನೆ. “ಇದನ್ನು ಏನೆಂದು ಕರೆಯುತ್ತೀರಿ?” “ಕಲ್ಲು ಬಂಡೆ” ಎಂದ ಒಬ್ಬ. “ಇಲ್ಲ, ಅದು ಬಂಗಾರವಡಗಿರುವ ಕಲ್ಲು ಬಂಡೆ&#82...

12345...70

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...