ವಸಂತ ಕಾಲ. ಎಲ್ಲೆಲ್ಲೂ ಚೆಲವು, ಶಿಷ್ಯ ಗುರುಗಳಲ್ಲಿಗೆ ಬಂದು “ನನಗೆ ಝನ್ ಬೋಧಿಸಿ” ಎಂದು ಬಿನ್ನವಿಸಿಕೊಂಡ.
ಗುರುಗಳು ಹೇಳಿದರು- “ಎಲ್ಲೆಲ್ಲೂ ಹೂವು ಅರಳಿದೆ. ಚೆಲುವು ತುಂಬಿದೆ. ಗಾಳಿಯಲ್ಲಿ ಗಂಧ ಉಯ್ಯಾಲೆಯಾಡುತ್ತಿದೆ. ದುಂಬಿ ಹಾಡುತ್ತಿದೆ. ಆರಾಧಿಸು, ಅನುಭವಿಸು. ತುಂಬಿಕೊ, ಸ್ಪಂದಿಸು. ಆದರೆ ಮನವು ತುಂಬಿದಾಗ ಹೇಗೆ ತುಂಬಿಕೊಳ್ಳುವೇ?”
“ನೀನು ಶರದ್ ಋತುವಿನಲ್ಲಿ ಬಾ. ಮನ ಬೋಳು ಮರವಾದಾಗ, ಚಿಗುರು ಬರುವುದಕ್ಕೆ, ತಡೆಯಿರುವುದಿಲ್ಲ. ಝನ್ ಬೋಧಿಸುವೆ. ನಿನ್ನ ಮನದ ಬೋಳು ರೆಂಬೆಗಳನ್ನು ಅಪ್ಪಿ ವಸಂತ ಮತ್ತೆ ಬರುತ್ತದೆ.” ಎಂದರು ಗುರುಗಳು.
ಶಿಷ್ಯನಿಗೆ ಝನ್ ಬೋಧನೆಯ ಕಿರಣ ಒಂದು ಮನದಲ್ಲಿ ಹೊಕ್ಕು, ಬೆಳಕು ಚೆಲ್ಲಿತು.
*****


















