ಎಳೆಬಾಳೆಯು ಸುಳೆಯೆಲೆಗಿಂತಲೂ
ತೆಳುವಾದ ನಿನ್ನ ಮೈದೊಗಲ ನೋಡುತ್ತಲೆ
ಕಾಣುವುದು-ನೇಕಾರರ ನಯದ ಕಣ್-ನೆಲೆ.
ಮಳೆಗಾಲದ ಮುಗಿಲುಗಳಿಗಿಂತಲೂ
ಬಣ್ಣದಲ್ಲಿ ಮಿಗಿಲಾದ ನಿನ್ನ ಕಣ್ಣ ನೋಡುತ್ತಲೆ
ಕಾಣುವುದು-ಜಿನುಗಾರರ ಜಿನುಗಿನ ಗೊತ್ತು.
ಉತ್ತಮಾಶ್ವದ ಗತ್ತಿನ ನಡಿಗೆಯ
ಸ್ವಚ್ಛಂದದುಸುರ ಕೇಳುತ್ತಲೆ
ತಿಳಿಯುವುದು-ಹಾಡುಗಾರರ ತಾಳಗತ್ತಿನ ಮೇಳ.
ಗಾಡಿಗಾರ ತಾವರೆಯ ಎಸಳಿನ
ಮೋಡಿಯ ಮಾಟಕ್ಕಿಂತಲೂ
ನಿನ್ನ ಕೈಕಾಲ್ ಬೆರಳುಗಳ ಮಾಟವ ನೋಡಿ
ಹೊಳೆಯುವದು-
ಕೈವಾಡದವರ ಕೈಚಳಕದ ಕುಸುರಿವ ಮೇಲುಪಂಙ್ತಿ.
*****