“ಸತ್ಯ ದರ್ಶನ ಮಾತಿನಲ್ಲೇ?- ಇಲ್ಲಾ ಮೌನದಲ್ಲೇ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ.
“ಸತ್ಯಕ್ಕೆ ಕಿವಿ ಬೇಕೆ? ಸತ್ಯಕ್ಕೆ ಬಾಯಿ ಬೇಕೇ?” ಎಂದು ಮತ್ತೆ ಸಂದೇಹದಿಂದ ಕೇಳಿದ.
“ಸತ್ಯಕ್ಕೆ ಹೃದಯ ಒಂದೇ ಸಾಕು” ಎಂದರು ಗುರುಗಳು.
“ಅದು ಹೇಗೆ?” ಎಂದ ಶಿಷ್ಯ.
“ಸತ್ಯ ಒಂದು ಕನ್ನಡಿಯ ಹಾಗೆ, ಸೂರ್ಯನ ಹಾಗೆ, ಅರಳುವ ಹೂವಿನ ಹಾಗೆ. ವಸಂತದಂತೆ. ಅನಂತದ ದಾರಿಯಂತೆ. ಹೃದಯ ಬಿಚ್ಚುತ್ತದೆ.” ಎಂದರು.
“ನಿಂತಾಗ ನಿನ್ನ ಹೃದಯದೊಳಗೆ ಬರುತ್ತದೆ. ಆಗ ತುಂಬಿಕೊ, ಸಾಕು. ಆಗ ಮಾತೇಕೆ?” ಎಂದಾಗ ಮೌನವಾಗಿ ಶಿಷ್ಯನ ಹೃದಯ ಸತ್ಯದಿಂದ ತುಂಬಿತು.
*****


















