ಗುರುಗಳು ಒಮ್ಮೆ ಶಿಷ್ಯ ವೃಂದವನ್ನು ಕರೆದು “ಮನವನ್ನು ಬರಿದು ಮಾಡಿಕೊಂಡು ಬನ್ನಿ.” ಎಂದು ಕಳುಹಿದರು.
ಒಬ್ಬ ಶಿಷ್ಯನೆಂದ “ಗಾಳಿ ಸ್ನೇಹಿತ, ನನ್ನ ಮನವನ್ನು ಗುಡಿಸಿ ಖಾಲಿ ಮಾಡಿಬಿಡುವ ನನಗೇನು ಯೋಚನೆ ಇಲ್ಲ” ಎಂದ.
ಮತ್ತೊಬ್ಬ ಶಿಷ್ಯ “ಮಳೆರಾಯ ಮಳೆ ಹುಯ್ದಾಗ ನನ್ನ ಮನ ತೊಳೆದು ಸಾರಿಸಿ ದಂತಾಗುತ್ತದೆ” ನನಗೇನೂ ಯೋಚನೆ ಇಲ್ಲ” ಎಂದು ಕೊಂಡ.
ಮತೊರ್ವ “ಹಿಮಪಾತವಾದಾಗ ಸ್ವಚ್ಛತೆಯಲಿ ನನ್ನ ಮನ ಬಿಳಿ ಬಣ್ಣದಂತಾಗುತ್ತದೆ.” ಎಂದು ಹೇಳಿ, ಸಂತಸ ಪಟ್ಟ.
ಗುರು ಶಿಷ್ಯರಲ್ಲಿ ಹೇಳಿದರು
“ಗಾಳಿಯೊಡನೆ ನಿನ್ನ ಮನದಲ್ಲಿ ಧೂಳು ಬಂದು ಸೇರದಿರುವುದೇ? ಮಳೆ ಹುಯ್ದಾಗ ನಿನ್ನ ಮನದಲ್ಲಿ ಮೊದಲೇ ಇರುವ ಬೀಜಗಳು ಮೊಳಕೆ ಬಾರದಿರುವುದೇ? ಇನ್ನು ಹಿಮವು ಬಿದ್ದಾಗ ನಿನ್ನ ಮನದಲ್ಲಿ ಹಿಮವು ಕರಗಿ ಜಲಪಾತದ ಧಾರೆ ಹರಿಯದಿರುವುದೇ? ಎಂದ ಮೇಲೆ ನೀವು ನಿಮ್ಮ ಮನವನ್ನು ಖಾಲಿ ಮಾಡಿದೆನೆಂಬ ಹಂಬಲ ಏಕೆ?” ಎಂದರು ಗುರುಗಳು.
*****


















