“ಗುರುಗಳೇ! ನಾಯಿ, ಬೆಕ್ಕು, ಇಲಿ, ಹಸು ಮುಂತಾದ ಪ್ರಾಣಿಗಳಲ್ಲಿ ದೈವ ಹೇಗೆ ಇರುತ್ತದೆ? ಹುಲಿ, ಆನೆ, ಕರಡಿ, ಸಿಂಹ ಮುಂತಾದುವುಗಳಲ್ಲಿ ದೈವ ಯಾವ ರೀತಿ ಇರುತ್ತದೆ? ಗಿಡ, ಮರ, ಹೂವು, ಕಾಯಿ, ಹಣ್ಣು, ಹಕ್ಕಿ, ಚುಕ್ಕಿ, ಭೂಮಿ, ಆಕಾಶ ಈ ಎಲ್ಲದರಲ್ಲೂ ದೈವವಿದೆ ಎಂದು ಹೇಗೆ ತಿಳಿಯಲಿ?” ಎಂದು ಕಳಕಳಿಯಿಂದ ಗುರುವಿನಲ್ಲಿ ಶಿಷ್ಯ ಬಾಲಕನೊಬ್ಬ ಕೇಳಿದ.
“ನಾಯಿ, ಬೆಕ್ಕು, ಕತ್ತೆ, ಹಸು, ಎಮ್ಮೆ ನಿನ್ನ ಹಿಂದೆ ಬರುವಾಗ ದೈವ ನಂಬಿಕೆಯಾಗಿ, ಭಾರ ಹೊರುವುದಕ್ಕಾಗಿ, ಹಾಲು ಕೊಡುವುದಕ್ಕಾಗಿ, ನಿನ್ನ ಹಸಿವು ಹಿಂಗಿಸುವ ದೈವವಾಗಿ ಬರುತ್ತದೆ. ಇನ್ನು ಹುಲಿ, ಆನೆ, ಕರಡಿ, ಸಿಂಹದಲ್ಲಿ ದೈವ ಬಲವಾಗಿ, ಧೈರ್ಯ, ಶೌರ್ಯದ ಪ್ರತೀಕವಾಗಿ ಬರುತ್ತದೆ. ಇನ್ನು ಇತರ ಸೃಷ್ಟಿಯಲ್ಲಿ ದೈವ ನಲುಮೆಯಾಗಿ ಒಲುಮೆ ತುಂಬಿರುವಾಗ ದೈವವನ್ನು ಕಾಣುವುದು ಕಷ್ಟವೇನು?” ಎಂದಾಗ ಶಿಷ್ಯ ಬಾಲಕ ಗುರುಗಳ ಮಾತು ಕೇಳಿಸಿಕೊಂಡು ಪ್ರಸನ್ನಗೊಂಡ.
*****


















