ಒಬ್ಬ ಶಿಷ್ಯ ಹಸಿ ಜೇಡಿ ಮಣ್ಣಿನಲ್ಲಿ, ಬುದ್ಧನನ್ನು ಮಾಡಿ ಹಸಿವಿಗ್ರಹವನ್ನು ಪೂಜಿಸಿ, ಜಲ ಧಾರೆಯಿಂದ ಅಭಿಷೇಕ ಮಾಡುತ್ತಿದ್ದ. ಕೊಡಗಟ್ಟಲೆ ನೀರು ಸುರಿದಾಗ, ಹಸಿಮಣ್ಣಿನ ವಿಗ್ರಹ ಕರಗಿ ಹರಿದು ಹೋಗುತ್ತಿತ್ತು.
ಇದನ್ನು ನೋಡುತ್ತಿದ್ದ ಗುರುಗಳು “ಇದೇನು ಮಾಡುತ್ತಿರುವೆ?” ಎಂದು ಶಿಷ್ಯನನ್ನು ಕೇಳಿದರು.
“ಬುದ್ಧನ ಅಭಿಷೇಕದ ನಂತರ ಬುದ್ಧತ್ವ ಸೃಷ್ಟಿಯಲ್ಲಿ ಒಂದಾಗುತ್ತಿದೆ, ಗುರುವೆ” ಎಂದ.
ಶಿಷ್ಯನ ಮನೋಭಾವವನ್ನು ಅರಿತು ಗುರುಗಳೂ ಪ್ರಸನ್ನಗೊಂಡರು.
*****


















