Home / ಅಭಿಮಾನದ ಹಣತೆ

Browsing Tag: ಅಭಿಮಾನದ ಹಣತೆ

ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ ಸಿರಿ ಗಂಧದ ಬೀಡಲ್ಲ ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ! ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ ! ಚೆಲುವ ಕನ್ನಡ ನೆಲದಲ್ಲಿ ಗೊಮ್ಮ...

‘ಲಬ್‌ಡಬ್ ಲಬ್‌ಡಬ್’ ಎನ್ನದೆ ಹೋದರು ನನ್ನಯ ಈ ಹೃದಯ ಕನ್ನಡ ಕನ್ನಡ ಎನ್ನತಲಿರುವುದು ಕೇಳೋ ಓ ಗೆಳೆಯ ಎದೆ ಸೀಳಿದರೂ ಅಕ್ಷರ ನಾಲ್ಕು ನನ್ನಲಿ ಇಲ್ವಂತೆ ಆದರೆ ಏನು? ಮೂರಕ್ಷರದ ಕನ್ನಡ ಇಹುದಂತೆ! ನನ್ನಯ ರಕ್ತದಿ ಹೀಮೊಗ್ಲೋಬಿನ್ ಕೊರತೆಯು ಉಂಟಂತೆ ಆದ...

ಕನ್ನಡದನ್ನವ ಉಂಡವರೆ – ನೀವ್ ಕನ್ನಡಿಗರು ಆಗಿ ಕಾವೇರಿಯನು ಕುಡಿದವರೇ – ನೀವ್ ನಮ್ಮಲಿ ಒಂದಾಗಿ ಅನ್ಯಭಾಷೆಯನು ನುಡಿವವರೆ ಕಲಿಯಿರಿ ಕನ್ನಡವ ಕರುನಾಡಿನ ಈ ನೆಲದಲ್ಲಿ ಮೆರೆಸಿರಿ ಸದ್ಗುಣವ ಕರ್ನಾಟಕದಲೆ ನಿಂತವರೆ ಕಾಯಿರಿ ಕನ್ನಡವ ಉಳಿ...

ಮಲೆನಾಡಿನ ಕೋಗಿಲೆ ನೀ ಹಾಡಿದೆ ಸ್ವರವೆತ್ತಿ ಬರಡಾದ ಎದೆಗಳಲಿ ಹಸಿರನ್ನು ಬಿತ್ತಿ ಅನಿಕೇತನದಿಂದ ಬಂದೆ ನಿಕೇತನದ ಕಡೆಗೆ ಮತ್ತೆ ಅನಿಕೇತನ ನೀ; ಜನಮನದಿ ನಿಕೇತನ ಕಗ್ಗತ್ತಲ ರಾತ್ರಿಯಲಿ ಮೂಡಿದೆ ಧೃವತಾರೆ ಕ್ರಾಂತಿ ಕಾಳಿ ಕಠಾರಿಗೆ ಹರಿಸಿ ಕಾವ್ಯಧಾರ ...

ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತ್ತಿದ್ದರೂ ಅನ್ಯರ ಬಾಯಿಗೆ ಉಣಿಸುತಿಹ ಹೀನರನ...

ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು ಬೆಳೆಸೋಣ ಕನ್ನಡ ನಾಡನು ಕಾಯುತಲಿ ಕನ್ನಡ ತಾಯಿಯ ಉಳಿಸೋಣ ನಲುಗಿದ ...

ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ… ನಿರಭಿಮಾನ ಬಗ್ಗಡವೋ ಬಗ್ಗಡ! ಅಲ್ಲಿ ನೋಡು ಕನ್ನಡ ಇಲ...

ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; ಸಪ್ತಸ್ವರ ಕನ್ನಡ ತೇಲಾಡುವ ಮೋಡಗಳಿಗೆ ಮುತ್ತನಿಟ್ಟ ಕನ್ನಡ; ಸಹ್ಯಾದ್ರಿ...

‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದರು ಆಗದ ಬಿ.ಎಂ.ಶ್ರೀ ಕನ್ನಡಕ್ಕೆ ಕರ್ನಾಟಕದಲೆ ತಿಥಿ ಎನ್ನುವನೀಗ ಕಾ.ವೆಂ.ಶ್ರೀ! ಶತಶತಮಾನದ ಇತಿಹಾಸದಲಿ ಅರಳುತ ಬಂದಿಹ ತಾಯಿನುಡಿ ಬೆಳಕನು ಬಿತ್ತಿಹ ಕವಿ‌ಋಷಿ ಕಲಿಗಳ ವಿಶ್ವಕೆ ತಂದಿಹ ನಮ್ಮ ನುಡಿ ಮರೆಯಾಗುತಿದ...

ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು! ಸ್ನೇಹಪರರ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...