ಮಲೆನಾಡಿನ ಕೋಗಿಲೆ ನೀ ಹಾಡಿದೆ ಸ್ವರವೆತ್ತಿ
ಬರಡಾದ ಎದೆಗಳಲಿ ಹಸಿರನ್ನು ಬಿತ್ತಿ
ಅನಿಕೇತನದಿಂದ ಬಂದೆ ನಿಕೇತನದ ಕಡೆಗೆ
ಮತ್ತೆ ಅನಿಕೇತನ ನೀ; ಜನಮನದಿ ನಿಕೇತನ
ಕಗ್ಗತ್ತಲ ರಾತ್ರಿಯಲಿ ಮೂಡಿದೆ ಧೃವತಾರೆ
ಕ್ರಾಂತಿ ಕಾಳಿ ಕಠಾರಿಗೆ ಹರಿಸಿ ಕಾವ್ಯಧಾರ
ಮನುಜಮತ ವಿಶ್ವಪಥ ಎದೆಎದೆಗೂ ಸಾರಿ
ನೆಲದ ಕಣ್ಣಾದೆ ನೀ; ಮಣ್ಣಿನ ಕುಡಿಯಾಗಿ
ನೂರು ದೇವರನೆಲ್ಲ ನೂಕಿದೆ ನೀನಾಚೆ;
ಭಾರತಾಂಬೆ ದೇವಿಯೆಂದು ಸಲಿಸಿ ಎದೆಪೂಜೆ
ಮನುಧರ್ಮ ಶಾಸ್ತ್ರವನ್ ಬಿಸುಡಿಗೆ ಬಹುದೂರ
ವಿಶ್ವಮಾನವ ಹಣತೆ ಹಚ್ಚಿ ಅದೆ ಅಮರ
ಕನ್ನಡಕೆ ಹೋರಾಡಿದ ಕನ್ನಡದ ಕಂದ
ಡಿಂಡಿಮವ ಬಾರಿಸಿದೆ ಶಿವಹೃದಯದಿಂದ
ಎಲ್ಲಿದ್ದರು ಎಂತಿದ್ದರು ಕನ್ನಡ ಬಾವುಟವ
ಮುಗಿಲೆತ್ತರ ಹಾರಿಸಿದ್ರೆ ಮುಗಿಲೆತ್ತರವಾದೆ
*****