ಕನ್ನಡದನ್ನವ ಉಂಡವರೆ – ನೀವ್
ಕನ್ನಡಿಗರು ಆಗಿ
ಕಾವೇರಿಯನು ಕುಡಿದವರೇ – ನೀವ್
ನಮ್ಮಲಿ ಒಂದಾಗಿ
ಅನ್ಯಭಾಷೆಯನು ನುಡಿವವರೆ
ಕಲಿಯಿರಿ ಕನ್ನಡವ
ಕರುನಾಡಿನ ಈ ನೆಲದಲ್ಲಿ
ಮೆರೆಸಿರಿ ಸದ್ಗುಣವ
ಕರ್ನಾಟಕದಲೆ ನಿಂತವರೆ
ಕಾಯಿರಿ ಕನ್ನಡವ
ಉಳಿಸುವ ಬೆಳಸುವ ನಿಟ್ಟಿನಲಿ
ತೋರಿ ನಿಮ ನಿಲುವ
ತಾಯ್ನಾಡುಗಳನು ತೊರೆದವರೆ
ಕನ್ನಡಕೇ ಮನ ಸಲಿಸಿ
ಇಲ್ಲಿಯ ಮಣ್ಣನು ತಿಳಿಯುತಲಿ
ಅಭಿಮಾನವ ಸೂಸಿ
ಅರಿಯುತ ಬೆರೆಯುತ ಸೋದರರೆ
ಬನ್ನಿರಿ ಒಂದಾಗಿ
ಭುವನೇಶ್ವರಿಯ ತರೆಳೆವ
ಭಿನ್ನತೆಯನು ನೀಗಿ
*****