ಕೋಗಿಲೆ ಕೊರಗುತಿದೆ
ನವಿಲು ಮರುಗುತಿದೆ
ಕನ್ನಡ ನಾಡಲ್ಲಿ ಸಿರಿ
ಗಂಧದ ಬೀಡಲ್ಲ
ಜಿಂಕೆ ಓಡದಿದೆ
ಹಕ್ಕಿ ಹಾರದಿದೆ
ಕನ್ನಡ ಬಾನಲ್ಲಿ ! ತಿಳಿ
ಗನ್ನಡ ನೀಲಿಯಲಿ
ಸಹ್ಯಾದ್ರಿಯ ಹಸಿರು
ಕಳಕೊಂಡಿದೆ ಉಸಿರು
ನಂದನ ವನದಲ್ಲಿ ! ಚೆಲುವ
ಕನ್ನಡ ನೆಲದಲ್ಲಿ
ಗೊಮ್ಮಟನ ನಿಲುವು
ಗುಮ್ಮಟದ ಬಲವು
ಕಾಣೆಯಾಯ್ತಿದೆಲ್ಲ ! ಚರಿತೆ
ಪಡೆದೀ ಮಣ್ಣಲ್ಲಿ
ಕವಿತೆ ಮೂಡದಿದೆ
ಹೃದಯ ಹಾಡದಿದೆ
ತುಂಬಿದ ಎದೆಯಲ್ಲಿ ! ಕನ್ನಡ
ತುಂಬಿದ ಕಣ್ಣಲ್ಲಿ
*****