ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ
ನವೆಂಬರ್ ಒಂದರಲ್ಲಿ
ಆದರೂ ‘ಕನ್ನಡ ಉಳಿಸಿ’ ಮಾತು
ಇಡೀ ವರ್ಷದಲ್ಲಿ
ಅಲ್ಲೂ ಕನ್ನಡ ಇಲ್ಲೂ ಕನ್ನಡ
ಎಲ್ಲೆಲ್ಲು ಕನ್ನಡವೋ ಕನ್ನಡ
ತಿಂಗಳಾಯಿತೆಂದರೇ…
ನಿರಭಿಮಾನ ಬಗ್ಗಡವೋ ಬಗ್ಗಡ!
ಅಲ್ಲಿ ನೋಡು ಕನ್ನಡ ಇಲ್ಲಿ ನೋಡು ಕನ್ನಡ
ಮೇಲೆ ನೋಡು ಕನ್ನಡ ಕೆಳಗೆ ನೋಡು ಕನ್ನಡ
ಭುವನೇಶ್ವರಿ ವೀರಭಟರ ಬಾಯಿ ತುಂಬ ಕನ್ನಡ
ಅಂಬೇಡ್ಕರ್ ವೀದಿಯಲಿ ನಾಯಕ ಮೆರವಣಿಗೆಯಲ್ಲಿ
ಕಲ್ಲು ಕಲ್ಲು ನಡುಗುವಂತೆ ಕೇಳಿ ಬಂತು ಕನ್ಡನ
ಕನ್ನಡಕ್ಕೆ ಶಾಪ ಏನೋ
ಕಣ್ಣು ಕಿವಿ ಮುಚ್ಚಿತ್ತು ವಿಧಾನಸೌಧ ಕಟ್ಟಡ!
ಕನ್ನಡ… ಕನ್ನಡ… ಆಕಾಶವ ತಬ್ಬಿತು
ಗಾಳಿಯನ್ನು ತುಂಬಿತು ಎಲ್ಲೆಲ್ಲೂ ಚೆಲ್ಲುವರಿದು
ಬಾಯ್ಮಾತಿಗೂ ಇಳಿಯಿತು
ಹೃದಯಕೇಕೋ ಇಳಿಯಲಿಲ್ಲ
ಅಂತರಂಗವಾಗಲಿಲ್ಲ
ಬಹಿರಂಗದ ಕನ್ನಡ ನಾವ್ ಕೊಂದ ಕನ್ನಡ!
*****