ಮೊಟ್ಟೆ

ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ ಒತ್ತಿದರೂ...

ಹತ್ತಿ… ಚಿತ್ತ… ಮತ್ತು…

ಹಚ್ಚಿಟ್ಟ ಹಣತೆಯಲ್ಲಿ ಹೊಸೆದು ಬತ್ತಿಯಾಗಿರುವ ಹತ್ತಿ ಮಿಂದು ಮಡಿಯುಟ್ಟ ಭಕ್ತನಂತೆ ತೈಲದಲ್ಲಿ ಮುಳುಗಿ ತಮದ ಕತ್ತಲ ಸುಡುತ ಬೆಳಕ ಬಟ್ಟೆಯ ತೊಡುವ ಯೋಗಿಯಂತೆ! ತನ್ನೊಡಲ ನೂಲಿನಲೇ ಜೇಡ ತನ್ನ ಜೀವಜಾಲದ ಕೇಡ ತಾನೇ ಬಗೆದು...

ಬದುಕು ಚಿಗುರುವುದೆಂದರೆ

ನನ್ನ ನಾ ನಿನ್ನ ನೀ ತಿಳಿದುಕೊಳ್ಳುವುದು. ನನ್ನೊಳಗೆ ನೀ ನಿನ್ನೊಳಗೆ ನಾ ಬೆಳಕಾಗುವುದು ಒಳಮೈ ಹೊರಮೈ ಕಾಯಿಸಿಕೊಳ್ಳುವುದು ಕಿರಣಕ್ಕೊಡ್ಡಿ ಮನಸ್ಸನ್ನು ದುಡಿಸಿಕೊಳ್ಳುವುದು ಹಸಿರ ಮತ್ತೆ ಮತ್ತೆ ಮೆದ್ದು ಮುದಗೊಳ್ಳುವುದು ಬೆಳಕ ಆಸರೆಗಾಗಿ ಕನಸ ಕಟ್ಟುವುದು...

ಮನಸ್ಸಿದ್ದಲ್ಲಿ ಮರುಭೂಮಿ

ಕೆಲವೊಮ್ಮೆ ನಾನು ಭಾವಿಸುವೆನು ಮರುಭೂಮಿಯೊಂದನು ಅದರೊಳಗೆ ಸರೋವರವೊಂದ ನಿರ್ಮಿಸುವೆನು ನೋಡಿದರೆ ನೀರು ಕನ್ನಡಿಯಷ್ಟು ನಿರಾಳ ಅಲ್ಲಿ ಆಕಾಶಕ್ಕೆ ಎತ್ತರದಷ್ಟೆ ಆಳ ಆಚೀಚೆ ಕಣ್ಣಳತೆಯುದ್ದಕೂ ಬರಿ ಮಳಲು ದಿನದಿನವು ಬದಲಾಗುತ್ತ ನಿನ್ನೆ ನೋಡಿದ್ದು ಇಂದು ಕಾಣಿಸದೆ...
ಅಮರ ಕಲಾವಿದ ಸಪ್ದರ

ಅಮರ ಕಲಾವಿದ ಸಪ್ದರ

ಹೊಸ ವರ್ಷದ ಹರುಷವನ್ನು ಸ್ವಾಗತಿಸುತ್ತಾ, ಸ್ವಾದಿಸುತ್ತಾ ದೆಹಲಿಯ ಸಮೀಪದ ಸಾಹಿ ಬಾಬಾದಲ್ಲಿ ಜನನಾಟ್ಯ ಮಂಚ ತಂಡದ ‘ಹಲ್ಲಾ ಬೋಲಾ’ ನಾಟಕದ ಹಾಸ್ಯಮಯ ದೃಶ್ಯ ವೀಕ್ಷಿಸುತ್ತಾ ಕಲೆಯ, ಅಭಿನಯದ ಸವಿ ಸವಿಯುತ್ತಲಿದ್ದ ಪ್ರೇಕ್ಷಕರ ಮಧ್ಯೆ ಒಮ್ಮೆಲೇ...

ರಾತ್ರಿಯಲ್ಲಿ ಹೆಜ್ಜೆ ಸದ್ದು

ಯಾವಾಗಲೂ ಹೆಜ್ಜೆಸದ್ದು ಯಾವಾಗಲೂ ರಾತ್ರಿಯ ಹೊತ್ತು ಹೆಜ್ಜೆ ಸದ್ದು ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ, ಯಾವಾಗಲೋ ತೆರೆದುಕೊಂಡು ಬಿಡುತ್ತದೆ ನಿನ್ನನೀಲಿ ನೆರಳನ್ನು ದಿನವೂ ರಾತ್ರಿ ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು? ಹೆಜ್ಜೆಗಳು ಹತ್ತಿರ...

ಹುತ್ತರಿ ಹಾಡು

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್‌ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲ ನೆಲವನು ತಣಿಸಿ ಜನಮನ ಹೊಲದ ಕಳೆ...

ರಾಮನಾಥನ ವರದಿ

ಅಂಥಿಂಥವನಲ್ಲ ರಾಮನಾಥ ಕಾರ್ಬನ್ ಕಾಪಿ ವರದಿಗಾರ, ಎಂಥೆಂಥವರನ್ನೋ ನುಂಗಿ ನೀರು ಕುಡಿದವನು ಒಂದರ್ಥದಲ್ಲಿ ಕ್ರಾಂತಿಕಾರ. ಅಸಾಧ್ಯ ಸತ್ಯವಂತ ರಾಮನಾಥ ನಾ ಹೇಳಿದ್ದನ್ನೇ ಕಕ್ಕಿದ, ಪದ ಅಳಿಸದೆ ಪದ ಬಳಸದೆ ಹೊಸಾ ಹೊಸಾ ಅರ್ಥ ಬೆಳೆದ....