
೧ ತಾರಿನ ತಂತಿಯ ಮೇಲೆಯ ನಲಿಯುತ ತಾನವ ನೀಡುತ “ಕುಕೂಕು” ನಾದವನೆಬ್ಬಿಸಿ ಬೂದಿಯ ಬೆಳವನು ಮೇದಿನಿ ಮೈಸಿರಿ ಮೆರಿಸುತಿದೆ ೨ ಬದುವಿನ ಬೇವೊಳು “ಕುವೋಽ” ಎನ್ನುತ ರಾಗದ ಕೋಗಿಲೆ ಕೂಗುತಿದೆ ಇನಿದನಿಯೆರಡನು ಮನದಿಂದಾಲಿಸೆ ಹರಣವು ಹರುಷದೆ ...
ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ ಉಂಡ ಅನ್ನದ ಋಣವ ತೀರಿಸದೆ ಏಕಿಂತು ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ? ಕನ್ನಡದ ಈ ನಾಡು ಸಿಂಗರದ ಬೀಡು ಸಿಂಗರದ ಈ ಬೀಡು ಕವಿಗಳೆದೆ ಹಾಡು ಹಾಡು ತುಂಬಿದ ನಾಡ...
ಮೂಲ: ಅರವಿಂದ ಗುಹಾ ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ ಎರಡೂವರೆ ರೂಪಾಯಿ ಕೊಟ್ಟು, ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ ಕೊಟ್ಟ ಹಣಕ್ಕೆ ತಕ್ಕಷ್ಟು; ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ ಸ್ಮೃತಿಯ ತಳದಾಳಕ್ಕೇ ಜಾರಿ...
ಸಾವರ್ ಜನಕೆ ಸಾವರ್ ದೇವ್ರು ! ಬಡವನ ದೇವ್ರು ವೊಟ್ಟೆ ! ದುಡ್ಡಿನ್ ಡಬ್ಬಿ ! ಯೋಳಾದ್ ಕೇಳು ! ಸತ್ಯಕ್ ನಾ ಬಾಯ್ ಕೊಟ್ಟೆ ! ೧ ತಿನ್ನದ್ ಕಲ್ಲಿನ್ ದೇವರ್ ಮುಂದೆ ತಿಂಡಿ ತುಂಬಿದ ತಟ್ಟೆ ! ಕಾಲಿ ತಿಂದು ಕಾಲಿ ತಿಂದು ಕೆರಳುರಳೈತೆ ವೊಟ್ಟೆ ! ೨ ಬಡವ...
ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು; ಫಲ ಏನೊ ? ಬಳೆಯುತಿದೆ ಬಯಲ ಬಸಿರು. ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು, ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು. ಗಾಳ ಗೋಳಿಡುವಂತೆ ಭೋರಾಡುತಿಹುದು; ಬಾಳುವೆಯೆ ಹೊಸದೊಂದು ಒಗಟವಾಗಿಹುದು. ನೆಲೆಯರಿ...
ಕವಿಯ ಪ್ರಥಮ ಕವನ ಮಗುವಿನ ಮೊದಲ ತೊದಲಿನಂತೆ ಗೀಚಿದ್ದೇ ಕಾವ್ಯ; ಆಡಿದ್ದೇ ಮಾತು ಅಪ್ಪು-ತಪ್ಪುಗಳೆಲ್ಲವೂ ಇಲ್ಲಿ ಒಪ್ಪು ಪುಳಕದ ಭಾವನೆ ತುಳುಕಿಸುವ ಕವನದ ಮೊದಲ ಸಾಲು ಮೊದಲ ಸಾಲಿನ ಜೊತೆ ಸಾಲು ಸಾಲಾಗಿ ತಳಕು ಹಾಕಿಕೊಂಡವದೆಷ್ಟೋ ಸಾಲು ನವ ಜನಿತ ಕವಿ...
ಎಂಥಾ ಚಂದ್ರಾಮ ಇವನೆಂಥಾ ಚಂದ್ರಾಮ ಪಡುಮನೆ ಇಳಿಯಲು ಹೋಗಿ ಇವ ನೀರಿಗೆ ಬಿದ್ದಾನ ನೀರ ತರುವವರ ಸೆರಗಿಗೆ ಬಿದ್ದಾನ ಎಂಥಾ ಚಂದ್ರಾಮ ಮೂಡಲ ಮನೆ ಏರಲು ಹೋಗಿ ಮುಗಿಲಿಗೆ ಮೆತ್ಯಾನ ಮನೆಯವಳ ಹೆಗಲಿಗೆ ಸುತ್ಯಾನ ಎಂಥಾ ಚಂದ್ರಾಮ ಮಲ್ಲಿಗೆ ಹೂಗಳ ಕೊಯ್ಯಲು ಹ...
ಮುರಿದ ಮೀನಾರುಗಳು, ಕಡಿದ ಮಂದಿರಗಳು ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು ಗತ ಮರೆತ ಇತಿಹಾಸದ ಪುಟಗಳು ಸರಸ ಜನನ, ವಿರಸಮರಣವೆಂದೆ ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ! ಲವಲವಿಕೆಯ ನಗುವಿನ ಒಡೆಯ ನೀನು ಸುನೀಲಾಳ ಬದುಕಿಗೆ ಪ್ರೀತಿ ಸುರಿದಾತ ಸಮನ್ವ...
‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದರು ಆಗ ಬಿ.ಎಂ.ಶ್ರೀ ಕನ್ನಡಕ್ಕೆ ಕರ್ನಾಟಕದಲೆ ತಿಥಿ ಎನ್ನುವನೀಗ ಕನ್ನಡಶ್ರೀ! ಶತಶತಮಾನದ ಇತಿಹಾಸದಲಿ ಅರಳುತ ಬಂದಿಹ ತಾಯಿನುಡಿ ಬೆಳಕನು ಬಿತ್ತಿಹ ಕವಿಋಷಿ ಕಲಿಗಳ ವಿಶ್ವಕೆ ತಂದಿಹ ನಮ್ಮ ನುಡಿ ಮರೆಯಾಗುತಿದೆ ನ...













