ಚಿಂತೆ – ನಿಶ್ಚಿಂತೆ
ಸಾಗರ ಸೇರುವವರೆಗೆ ನದಿಗಳಿಗೆ ಚಿಂತೆಯೇ ಚಿಂತೆ ಸೇರಿದ ಮೇಲೆ ನಿಶ್ಚಿಂತೆ *****
ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ನೂರಕ್ಕೆ ನೂರು ಹುಬ್ಬೇರಿಸಬೇಡಿ ಹುಟ್ಟಿದವರು ಸಾಯಲೇಬೇಕಲ್ಲ ಕೊನೆಗಾದರೂ! *****
ಡೈವೊರ್ಸುಗಳ ತಪ್ಪಿಸಬಹುದು ಸ್ವಲ್ಪ ಮನಸ್ಸು ಮಾಡಿದರೆ ಮದುವೆಗಳನ್ನೇ ತಪ್ಪಿಸಬಹುದು ದೊಡ್ಡ ಮನಸ್ಸು ಮಾಡಿದರೆ *****
ಆಸ್ತಿಯಲ್ಲಿ ಸಮಪಾಲು ಕಾನೂನಿನ ಸಮದೃಷ್ಟಿ ಹೆಣ್ಣುಮಕ್ಕಳಿಗೆ ವಕ್ರದೃಷ್ಟಿ ತವರಿಗೆ ಬಿಟ್ಟು ಎಳ್ಳುನೀರು ಜೀವನಪರ್ಯಂತ ಕಣ್ಣೀರು *****
ಬಲಗೈಲಿ ದಾನಕೊಟ್ಟರೆ ಎಡಗೈಗೆ ಗೊತ್ತಾಗಬಾರದಂತೆ ಹಿಂದಿನವರ ವಿಚಾರ ಈಗಿನವರು ದಾನಕೊಟ್ಟರೆ ಕಹಳೆಯ ಬಾಯಿಗೆ ಮುತ್ತಿಟ್ಟಂತೆ ಪ್ರಚಾರವೋ ಪ್ರಚಾರ *****