
ಮೂಲ: ರವೀಂದ್ರನಾಥ ಠಾಕೂರ್ ಕ್ರಾಸಿಂಗ್ ೧ (The Sun breaks out….. ಎಂಬ ಕಾವ್ಯಖಂಡ) ಬಂದೇ ಬಿಟ್ಟಿತು ನಾ ಹೊರಡುವ ದಿನ ಉದಯಿಸಿ ಬಂದ ಸೂರ್ಯ, ದೇವರ ಬೆರಗಿನ ನೋಟದ ಹಾಗೆ ಬಾನು ದಿಟ್ಟಿಸಿದೆ ಬುವಿಯ. ಎಲ್ಲಿಯ ಕರೆಯೋ ಏನೋ ತಿಳಿಯದೆ ಖಿನ್ನವ...
ಮೂಲ: ನಜರುಲ್ ಇಸ್ಲಾಂ ಅಯ್ಯೋ ಪೆದ್ದಣ್ಣ ಯಾರು ಹೇಳಿದ್ದೊ ನೀ ಕಳ್ಳ ಅಂತ? ಖದೀಮ ಅಂತ ? ನೋಡು ಇಲ್ಲಿ ಸುತ್ತ ಕೂತಿದೆ ಹೇಗೆ ಮೆತ್ತೆ ಪೀಠದ ಮೇಲೆ ಅಸಲುಗಳ್ಳರ ತಂಡ! ರಾಜ್ಯಸೂತ್ರವ ಹಿಡಿದು ರಕ್ತ ಹೀರಿದೆ ಹೇಗೆ ಎಲ್ಲರಿಗು ಮೇಲೆ ಅತಿ ಭಂಡ! ಯಾರಪ್ಪ ಡ...
ಮೂಲ: ಜಯ ಗೋಸ್ವಾಮಿ ಸ್ವಪ್ನಮೋಹಿತನಂತೆ ಸಾವನ್ನೂ ಬದಿಗಿಟ್ಟು ನೀನು ನಿದ್ರಿಸುತ್ತಿರುವೆ ನಿದ್ದೆ, ಎಚ್ಚರ, ಮತ್ತೆ ನಿದ್ದೆ ಎರಡೂ ನೆಲೆಗೆ ಹೊರಳುತ್ತಲೇ ಇರುವೆ. ನಾವು ಬಂದಿದ್ದೇವೆ ನಿನ್ನ ಕಾಣುವುದಕ್ಕೆ, ನಿನ್ನ ಮಕ್ಕಳೊ ನಾವು ಓ ಅರಸುಕುವರ, ಇದು ...
ಮೂಲ: ಸುತಪಾ ಸೇನ್‌ಗುಪ್ತ ಆಮೇಲೆ ನನ್ನ ನಾದಿನಿ ಮನೆಗೆ ಹೋದೆ, ಅತ್ತೆ ಮಾವಂದಿರನ್ನು ಒಲಿಸಿ ಮೆಚ್ಚಿಸಿದೆ. ತೃಪ್ತಿಗೊಂಡ ಹಿರಿಯರು ಸರ್ಪಬಂಧನ ಬಿಚ್ಚಿ ಮುಕ್ತಳಾಗಿಸಿದರು. ಆದರೂ ಪೂರ್ತಿ ವಿಷ ಆರಿಲ್ಲ ಈಗಲೂ; ನನಗೀಗ ಏನನ್ನೂ ಮಾಡಲಾಗುತ್ತಿಲ್ಲ, ಲೇಖ...
ಮೂಲ: ಭಾಸ್ಕರ ಚಕ್ರವರ್ತಿ ಇಪ್ಪತ್ತೊಂದನೆ ಶತಮಾನದ ಪ್ರಿಯಜನಗಳೇ ದಯವಿಟ್ಟು ನಮ್ಮನ್ನು ಮರೆತುಬಿಡಿ ನೀವು. ಸ್ವಾರ್ಥಿಗಳಿದ್ದೆವು ನಾವು ಅಸ್ವಸ್ಥರಿದ್ದೆವು, ಹಿಂಸೆಯಲ್ಲಿ ಪಳಗಿಯೂ ವಿಷಣ್ಣರಾಗಿದ್ದೆವು ನಾವು. ನಾವು ಬದುಕಿದ್ದದ್ದು ಅಣುಬೂದಿ ಆಕಾಶದಲ...
ಮೂಲ: ಸುತಪಾ ಸೇನ್‌ಗುಪ್ತ ಮೂವಿ ಮುಗಿದಿದೆ; ಚಿಕ್ಕ ಓಣಿಗಳ ದಾಟಿ ಬಂದಿದ್ದೀಯೆ ಈಗ ಮುಖ್ಯರಸ್ತೆಗೆ ನೀನು ನಟ್ಟ ನಡುರಾತ್ರಿ; ಹೊರಟಿದ್ದೀಯೆ ಮತ್ತೆ ಮನೆಕಡೆಗೆ – ಬಲು ದೂರ. ರೈಲ್ವೆ ಹಳಿಬದಿಯಲ್ಲಿ ನಡೆಯಬೇಕಿದೆ ನೀನು ಮಂದ ಬೆಳಕಿನ ಕಂದೀಲನ್ನ...














