ಎಷ್ಟೊ ಹೇಮಂತಗಳಿಂದ ಕಾಯುತ್ತಿದ್ದೇನೆ ಇಲ್ಲಿ ಈ ಹೊಸ್ತಿಲಲ್ಲಿ ನಾನೊಳಗೆ ಬರಬೇಕು ನಿನ್ನೊಳಗೆ ಸೆಳೆ ಎಳೆ ಎಳೆಯಾಗಿ ಸೆಳೆ ಬೆಂಕಿಯ ಸೆಳೆಯಾಗಿ ಸುಳಿಯಾಗಿ ಸೊನ್ನೆಯ ಮಾಡಿ ನುಂಗು ನನ್ನನು ನಿನ್ನ ಹೊಕ್ಕುಳಿನೊಳಕ್ಕೆ ಆ ಹರಹಿನಲ್ಲಿ ಬಯಲಾಗಲೆ?...
ಬೆಳಕಿನ ಮುಖಗಳಿವೆ ಮಣ್ಣಿನ ಮುಖಗಳಿವೆ ಇವೆರಡರ ನಡುವೆಯೊಂದು ದಾರಿ ಹುಡುಕುತ್ತೇನೆ: ಮನುಷ್ಯರ ಮುಖಗಳತ್ತ ಕೊಂಡೊಯ್ಯುವ ದಾರಿ ಮುಖವಿಲ್ಲದವನು ನಾನು. ನಿನ್ನ ಮುಖ ನನ್ನದು ಅವನದೂ ನನ್ನದೇ ಅವಳದೂ ಹೌದು. ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ...
ಮುಂಬೆಳಗ ಮಂಜಿಗೆ ತೆರೆದ ಪುಟ್ಟ ಕಣ್ಣುಗಳು ರಣ ಮಧ್ಯಾಹ್ನದ ಝಳಕ್ಕೆ ಕರಗಲಿಲ್ಲವೆ? ಮಾನವನ ಕಣ್ಣುಗಳಿಗೆ ಹೆಚ್ಚು ಬೆಳಕು ತಾಳುವ ಶಕ್ತಿಯಿಲ್ಲ ಎಂದೆ? ಕತ್ತಲೆಯಿಂದ ಬಂದೆ ವಾಸ್ತವತೆಗೆ ಅದ್ಭುತದಿಂದ ಸಾಮಾನ್ಯಕ್ಕೆ ಸೌಂದರ್ಯದಿಂದ ಆಕಾರಕ್ಕೆ ತುಟಿಗೆ ತುಟಿ...
[caption id="attachment_9001" align="alignnone" width="300"] ಚಿತ್ರ: ಕಾಯ್ ಕಲ್ಹ[/caption] ಮತ್ತೊಮ್ಮೆ ಹುಟ್ಟಿ ಬರಲೆ? ಮತ್ತೊಮ್ಮೆ ಹುಟ್ಟಿ ಬರಲೆ? - ಎಂದು ಕತ್ತಲಿನಿಂದ ಕೇಳಿ ಬರುತಿದೆ ನಿನ್ನ ಧ್ವನಿ. ಮತ್ತೊಮ್ಮೆ ನೀ ಬಂದರೆ ಥರ್ಮೋಮೀಟರು ಇಟ್ಟು...
ನಿನ್ನ ದಮ್ಮಯ್ಯ ತಪ್ಪು ತಿಳಿಕೋಬೇಡ ನನ್ನ ತಿಂದದ್ದೆ ತಿಂದು ಜಗಿದದ್ದೆ ಜಗಿದು ಬರುತಿದೆ ನನಗೆ ವಾಕರಿಕೆ ಅಷ್ಟೆ ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು ಅನ್ನ ಮೊಸರು - ನಾ ಹುಟ್ಟಿದಂದಿನಿಂದ ಮುಕ್ಕಿದ್ದು. ಬದುಕಬೇಕಲ್ಲ...
ಅಷ್ಟಗಲ ಬಾಯಿ ತೆರೆದು ಗುಂಡಿಯಿಲ್ಲದ ನನ್ನ ಪ್ಯಾಂಟ್ಸಿನ ಹಾಗೇ ನಗಬೇಡ ನನೆದುರು ಕುಳಿತು ಮರೆತು ಹೋದ್ದಲ್ಲ ಜನಕ್ಕೆ ಅಗೌರವ ತೋರಿಸುತೇನೆ ಎಂದಲ್ಲ ಮುಖ್ಯ ಇದಕ್ಕೆ ಬಟನ್ಸೆ ಇಲ್ಲ. ನೀ ನಗುತೀಯ! ಹುಟ್ಟಿಬಂದಾಗ ಮಾತು ಕೊಟ್ಟದ್ದುಂಟೆ...
ಹೆಂಡದಂಗಡಿಯಂತೆ ಕತ್ತಲು ಕೋಣೆ ನಮ್ಮ ಮನೆ ದೇವರ ಕೋಣೆ ದಿನಕೆರಡು ಬಾರಿ ಅವನ ಸ್ನಾನ ಊಟ ಉಪಚಾರ ಧೂಮಪಾನ ಈಸಾಯಿ ಧಪನದಂತೆ ಧೂಪಾನದ ಹೊಗೆ ಹಿತ್ತಾಳೆ ತಟ್ಟೆಯಲಿ ಕೆಂಪು ದಾಸವಾಳದ ಹೂವು ಆಗತಾನೇ ಕೊರೆದಿಟ್ಟ...
ಹ್ಯಾಮ್ಲೆಟ್ಟು ನಾನಾಗಿ ಕ್ವಿಕ್ಸೋಟನಾಗಿ ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ ಆಡಿದ್ದು ಮೂರು ಬೀದಿಗಳ ಮಧ್ಯೆ ನಿಂತು ಸಾಕ್ರೆಟಿಸ್ ಮರೆತದ್ದು ನಾನು ಸಾರುವೆನೆಂದು ಬೊಗಳಿದ್ದು ಈ ಮನೀಷೆ ಈ ಒಳತೋಟಿ ಅನುಭವಿಸಿ ಅನುಭವಿಸಿ ಸೋತು ಸುಸ್ತಾಗಿ...