ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಗುರ್..... ಟೈಗರ್ ಎಂಬ ಹೆಸರಿನಲೆ ಒಂದು ಕಾವ್ಯವಿದೆ. ಆದ್ದರಿಂದ ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು. ಇವರಿಗೆಲ್ಲ ಏರಿದೆ ಏನೋ ಮತ್ತು ಬೊಗಳಬೇಕು ಒಂದು ಭಾಷಣ ಪರ್ವತದಿಂದ ಕ್ರೈಸ್ತನ ಹಾಗೆ ನಾನು ಟೈಗರ್ ಎಂಬ ರಾಜನಾಯಿ...

ಸಾವಿನ ಮನೆ

ಹೊಲೆ ಮನೆ ಹೊಲೆಯಾಗುವ ಮನೆ ಸತ್ತವರ ಮನೆ ಸಾವಿನ ಮನೆ ನನಗೆ ಡಿಕಾಕ್ಷನ್ ಮಾತ್ರ ಸಾಕು ಎಂದರು ಇವರು ಏನೊ ತಲೆನೋವು ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು ಎಳೆಯುತ್ತಿದೆ ನರ ಸುಮ್ಮನೇ ಇರುವುದು...

ವೈಯಕ್ತಿಕತೆ

ಈ ವೈಯಕ್ತಿಕತೆಯೊಳಗಿಂದ ಜಾರಿ ನಿರಾತ್ಮಕನಾಗಿ ಜಾಗತಿಕ ಸಂವೇದನೆಯಲ್ಲಿ ಸೇರಿ ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ ಯಾರದೋ ಕೊರಳಿಗೆ ಜೋತು ಓ! ನಾನೆ ನೀನಾಗಬೇಕು ನಾನಿಲ್ಲದಿರಬೇಕು ಎಂದು ತಡಬಡಿಸಿದ್ದೇನೆ ಯಾರದೋ ಎದೆ ನಡುವೆ ತಲೆಯಿರಿಸಿ ನಿನ್ನಲ್ಲಿ ನಾನಾಗಬೇಕು...

ಸರ್ಕಸ್ಸು

ಜಾಗತಿಕ ಸರ್ಕಸ್ಸು ಆಕಾಶದ ಮೇಲೆ ಅಂತರ್ಲಾಗ ಅಕ್ರೊಬಾಟಿಕ್ಸ್ ನಕ್ಷತ್ರದಂತೆ ಹಾಕಿ ವಿದ್ಯು- ದ್ದೀಪಗಳ ಜಗ್ ಜಗ್ ಪ್ರಭೆಯಲ್ಲಿ ಕತ್ತಲನು ತೋಳ ಸೆರೆಯೊಳಗೆ ಸೆರೆಗುಡಿಸಿ ಹಿಡಿದ ಹುಡುಗಿಯರ ಮಸಲತ್ತು ಸಾವಿರದೆಂಟು ಆಟಗಳ ಜಾದೂ ಜಗತ್ತು. ಅನಿಶ್ಚಿತತೆಯ...

ಕೆಸರು

ನನಗೇನೊ ಆಗಿದೆ ಮಾಡಿನ ಮೂಲೆ ಮೂಲೆಯಲಿ ಹಾಯಿ ಬಿಚ್ಚಿದ ಜೇಡನ ಬಲೆಗಳನೆಲ್ಲ ಪಿಂಡಮಾಡಿ ನುಂಗಬೇಕೆನಿಸುತ್ತದೆ ತಲೆಗೂದಲು ಕಿತ್ತು ಮುಖ ಪರಚಿ ಲಂಗೋಟಿ ಹರಿದು - ಬೆಂಕಿಯ ಪಂಜು ಹಚ್ಚಿ ನಗರದ ಬೀದಿ ಬೀದಿಯಲಿ ಓಡಬೇಕೆನಿಸುತ್ತಿದೆ...

ಮುಖವಾಡಗಳು

ನನ್ನ ಹೊರಗಿನ ಜೀವಿತದಲ್ಲಿ ಹೆರರ ಮುಖವಾಡಗಳ ನೆರಳು ನನ್ನೊಳಗಿನ ಜೀವಿತದಲ್ಲಿ ನನ್ನದೇ ಮುಖವಾಡಗಳ ನೆರಳು. ಸೋಮವಾರಕ್ಕೆ ಬೂದು ಮುಖವಾಡ ಶನಿವಾರಕ್ಕೆ ಕಪ್ಪು ಮುಖವಾಡ ಆದಿತ್ಯವಾರವೋ ರಂಗು ರಂಗಿನ ಮುಖವಾಡ ಬನ್ನಿ ನಿಮ್ಮ ಮುಖಕ್ಕೂ ಬೇಕು...

ಪ್ರಜ್ಞೆ

ಹೊಗೆಯ ಮೇಲೆ ಇಬ್ಬನಿ ಇಳಿದು ಇರುಳ ಮಬ್ಬು ಬೆಳಕಿಗೆ ಟ್ರಾನ್ಸ್ ಪೆರೆನ್ಸ್ ಹಿಡಿದಂತೆ ಛಾವಣಿ ಬಿದ್ದ ಹಳೆ ಮನೆಯ ಒಳಗೆ ಮುರಿದ ತೊಲೆಗಳಲಿ ತಲೆಕೆಳಗಾಗಿ ತೊನೆವ ಬಾವಲಿಗಳ ಹಾಗೆ ಜೇಡನ ಬಲೆಯ ಗಂಭೀರತೆಯ ಮೇಲೆ...

ಹಾಸಿಗೆ

ಹಾಸಿಗೆಯಿರುವುದು ನಿದ್ದೆಗೆಂದು ಯಾರು ಹೇಳಿದರು? ಅದು ಆನಂದಿಸುವುದಕ್ಕೆ ತಬ್ಬಿ ಹೊರಳಾಡುವುದಕ್ಕೆ ಎಲ್ಲ ಮರೆಯುವುದಕ್ಕೆ, ತೆರೆಯುವುದಕ್ಕೆ ಉದ್ದಕ್ಕು ಮೈಚಾಚಿ ಹಾವಸೆಯಾಗಿ ನಿನ್ನ ಪರೆಯಾಗಿ ನಾ ನೆನೆಯುತ್ತೇನೆ: ನಾನು ಇಲ್ಲೆ ಹುಟ್ಟಿದ್ದು ಸತ್ತದ್ದೂ ಇಲ್ಲೆ ಇದರ ಮಧ್ಯೆ...