ವೈಯಕ್ತಿಕತೆ

ಈ ವೈಯಕ್ತಿಕತೆಯೊಳಗಿಂದ ಜಾರಿ ನಿರಾತ್ಮಕನಾಗಿ ಜಾಗತಿಕ ಸಂವೇದನೆಯಲ್ಲಿ ಸೇರಿ ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ ಯಾರದೋ ಕೊರಳಿಗೆ ಜೋತು ಓ! ನಾನೆ ನೀನಾಗಬೇಕು ನಾನಿಲ್ಲದಿರಬೇಕು ಎಂದು ತಡಬಡಿಸಿದ್ದೇನೆ ಯಾರದೋ ಎದೆ ನಡುವೆ ತಲೆಯಿರಿಸಿ ನಿನ್ನಲ್ಲಿ ನಾನಾಗಬೇಕು...

ಅಸಹಾಯಕತೆ

ಅವೀರ್ಭವಿಸಿದೆ ಮೂರ್ತ ಅಮೂರ್ತಗಳ ನಡುವಿನ ಸ್ವರೂಪ ಮುಂದಕ್ಕಿಡುವ ಹಾದಿ ಹಿಂದಕ್ಕೋಡುತಿದೆ ಅಲ್ಲೊಂದು ಕಡಲು ಮೇಲೊಂದು ಮುಗಿಲು ದಾಟಿ ನದಿ ತಟವ ಕಾಡು ಗಿರಿಯ ಹಾದು, ಮುಗಿಲಂಚನು ಮುಟ್ಟುವಾಗಿನ ಸಂಭ್ರಮ ಗೆಲುವ ಮೀಟಿ ಪಿಸು ಪಿಸು...