ಕೆಸರು

ನನಗೇನೊ ಆಗಿದೆ ಮಾಡಿನ ಮೂಲೆ ಮೂಲೆಯಲಿ ಹಾಯಿ ಬಿಚ್ಚಿದ ಜೇಡನ ಬಲೆಗಳನೆಲ್ಲ ಪಿಂಡಮಾಡಿ ನುಂಗಬೇಕೆನಿಸುತ್ತದೆ ತಲೆಗೂದಲು ಕಿತ್ತು ಮುಖ ಪರಚಿ ಲಂಗೋಟಿ ಹರಿದು - ಬೆಂಕಿಯ ಪಂಜು ಹಚ್ಚಿ ನಗರದ ಬೀದಿ ಬೀದಿಯಲಿ ಓಡಬೇಕೆನಿಸುತ್ತಿದೆ...

ಸ್ವಾಗತ

ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ ಜೇಡನ ಸಮೇತ ಕಿತ್ತೆಸೆದಿರುವೆ ಬರುವುದಾದರೆ ಇಂದೆ ಬಂದುಬಿಡು ತೋರಣವಿಲ್ಲ ಬಾಗಿಲಿಗೆ ಹೊಸಿಲಲ್ಲಿಲ್ಲ ರಂಗೋಲಿ ಎಂದೆಲ್ಲ ಸಬೂಬುಬೇಡ ನೀ ಬಂದೇ ಬರುವೆಯಾದರೆ...