
ನನ್ನದೆಂಬುದೇನಿದೆಯೋ ನಿನ್ನದೇ ಎಲ್ಲಾ ಸೂತ್ರಧಾರಿ ನೀನಾಗಿರಲು ಪಾತ್ರಧಾರಿಗಳೆಲ್ಲಾ ನಾನಾದರೋ ತಿಳಿಯೆ ಮಾಯದಾಸೆರೆಯಲಿ ಎಲ್ಲೆಲ್ಲೂ ನೀನಿರಲು ಕಾಣದಾಗಿಹೆ ||ನ|| ಮೌನ ಮಾತಾಡುವುದೇ ಕಾಡುವುದೇ ಪ್ರೇಮ ಸುಮ ಭಕುತಿಯಲಿ ಬಾಡುವುದೇ ಬಾಳಿನಂದದ ದೀಪ ರೂಪವ...
ತಡೆಯದಿರೆ ಮನವ ಮನದಾ ಭಾವನೆಯಾ ಭಾವದೆಳೆಯ ಬೆರೆತ ನೋವು ಕಣ್ಣ ನೀರಂಚಲಿ ಸೆರೆಯಾಗಿದೆ|| ಬೆರೆತಂಥ ಸ್ಪಂದನ ಜೀವನದಿಯಾಗಿ ಸೇರುತಲಿ ದೋಣಿಯ ಕಾಣದೆ ದಡವ ಸೇರದೆ ಇನಿಯಾ ಕಾದಿಹೆ|| ಮನದಾಸೆ ಮಾಗಿ ಋತುರಂಗಿನ ಬಾನಾಡಿಯಾಗಿ ಬಾನಲ್ಲಿ ಹಾರುತ ದೂರ ಕೂಗಿ ಕರ...
ಹಾರೆ ನೀ ಹಕ್ಕಿ ಹಾರೆ ನೀಲಾಕಾಶದ ದಿಗಂತದಲಿ ಬೆಳ್ಳಿ ಚುಕ್ಕಿ ಬಿಡಿಸಿ ರಂಗೋಲಿ ಬಾರೆ ನೀ ಹಕ್ಕಿ ಬಾರೆ ನನ್ನ ನಿನ್ನ ಬಂಧ ತಿಳಿ ಹೇಳು ಬಾರೆ ನೀ ಬಾರೆ ಜಾಣೆ ಹಕ್ಕಿ ||ಽಽಽಽ ಬೆಳ್ಳಿ ಹಕ್ಕಿ ನೀನು ಬಂಗಾರ ಮೈ ಬಣ್ಣ ಸಿಂಗಾರದ ನೆರಿಗೆ ಉಟ್ಟ ಚೆಲುವೆ ಹ...
ಹಾಡಿನಂದ ರೂಪ ನಾನು ಕಲಿಯಲಿಲ್ಲ ಕಲಿಸಿದಾದರೇನು ನಾನು ಕಲಿಯಲಿಲ್ಲ || ಹೃದಯವಂತಿಕೆಯ ಪ್ರೀತಿ ಯಾರು ತೋರಲಿಲ್ಲ ಯಾರಿಗೂ ಯಾರೆಂದನರಿತು ಮನವು ತಿಳಿಯಲಿಲ್ಲ || ಹಾಡು ಬರಿದಾದರೇನು ನನ್ನ ಭಾವಗಳು ಬರಿದಾಗಲಿಲ್ಲ ಭಾವನಂದದ ರೂಪ ಕಲಿಸಿದಾದರೇನು ನಾನು ಕ...
ಭಯವೇತಕೆ ಮನವೇ ಬದುಕು ಬಯಲಿನಾಟದ ನಿಲುವು || ಹುಟ್ಟಿರಲು ಭಯಕಾಡಲಿಲ್ಲ ಮೆಟ್ಟಿರಲು ಭಯವೆಂಬುದಿಲ್ಲ ಬರಲು ಮುಪ್ಪು ಭಯವೇತಕೆ ಸಾವು ನೇರಳಿನಾಟದೆ ಬೆಪ್ಪನಾದೆ ನೀನು || ಪಾಪಿ ನಾನು ಪುಣ್ಯ ಧಾರೆ ಎರೆದು ಧರ್‍ಮಕರ್‍ಮ ಪಕಳೆ ತೆರೆದು ತಾನು ಆನು ನೀನು ...
ಮೋಡ ಕವಿದಿದೆ ಬೆಳ್ಳಿ ಕಿರಣಕೆ ಕವಿದ ಮೋಡವ ಸರಿಸುವರಾರು || ಕರಗಿದೆದೆಯಾ ತೆರೆಯ ಹಾಸುವ ಬೆಳ್ಳಿ ಕಿರಣಕೆ ಏಳು ಬಣ್ಣ ತುಂಬಿ ನೆಲದೆದೆಯಾ ತಂಪಾಗಿರಿಸಿ ವರ್‍ಷನಲ್ಲಿ ಅನಂತವಾಗಿ ತಲ್ಲಣಗೊಳಿಸುವರಾರು || ತುಂತುರು ಹನಿಗಲ್ಲ ಸವರಿ ತುಟಿಯಂಚಿನ ನಗುವನಿ...
ಸ್ನೇಹವೆ ಜೀವನ ಪಾವನ ಭಾವನ ಚೇತನ ಕಿರಣ ಆನಂದ ವಿತಾನವು || ಸ್ನೇಹವೆ ಸೆಲೆಯು ಮನದಾ ಅಲೆಯು ಬಲೆಯ ಬೀಸಿದಾ ಅಂಬಿಗನ ಆಹ್ವಾನವು || ಸ್ನೇಹವೆ ಸರಸ ವಿರಸ ವಿರಹ ನೋವಲಿ ಕಾಣುವ ಮಂದಾರ ಸುಮಬಾಣವು || ಸ್ನೇಹವೆ ನೆಲವು ಅಳಿವು ಉಳಿವು ಹಸಿರಾ ಉಸಿರಾಗಿ ಬೆ...
ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮ ಗಣ ಭಾವೈಕ್ಯತೆಯ ಗೂಡು ನಮ್ಮದು || ಜನನಿ ಜನುಮ ಭೂಮಿ ಸ್ವರ್‍ಗ ತಾಳ ಮುಗಿಲ ಕಾನನದೊಳಗಣಾ ಸಮೃದ್ಧಿ ಚೆಂದ ಗಂಧ ಮೆರೆದ ಭಾವೈಕ್ಯತೆಯ ಗೂಡು ನಮ್ಮದು || ಕನಕ ದೃಷ್ಟಿ ವನಿ...
ನನ್ನದಲ್ಲ ಈ ಕವಿತೆ ನನ್ನ ಮನಸಿನದು ನನ್ನ ಭಾವದ ಅಲೆಗಳದು ಹರಿಗೋಲ ಲೀಲೆಯದು || ದೋಣಿಯಲಿ ಸಾಗುತ ಬೀಸಿ ತಂಗಾಳಿಯಲಿ ಕಲರವಗೀತೆ ಚಿತ್ರ ಚಿತ್ತದೆ ದಡವ ಸೇರುವದೊಂದಾಸೆಯಲಿ ನನ್ನ ಮನವು || ಗೋಧೂಳಿಯ ಹೊಂಬೆಳಕಿನಲಿ ಸುಂದರ ಕನಸ ಎಳೆಯಲಿ ಭಾವನೆಗಳ ಜೊತೆ...














