ಸ್ನೇಹವೆ ಜೀವನ
ಪಾವನ ಭಾವನ
ಚೇತನ ಕಿರಣ
ಆನಂದ ವಿತಾನವು ||
ಸ್ನೇಹವೆ ಸೆಲೆಯು
ಮನದಾ ಅಲೆಯು
ಬಲೆಯ ಬೀಸಿದಾ
ಅಂಬಿಗನ ಆಹ್ವಾನವು ||
ಸ್ನೇಹವೆ ಸರಸ
ವಿರಸ ವಿರಹ
ನೋವಲಿ ಕಾಣುವ
ಮಂದಾರ ಸುಮಬಾಣವು ||
ಸ್ನೇಹವೆ ನೆಲವು
ಅಳಿವು ಉಳಿವು
ಹಸಿರಾ ಉಸಿರಾಗಿ
ಬೆರೆತ ಕಾಮನ ||
ಸ್ನೇಹವೆ ಒಲವು
ನಲಿವು ಗೆಲುವು
ಮನವಾ ತಣಿವಾ
ಸುಂದರ ಸೋಪಾನವು ||
ಸ್ನೇಹವೆ ನೆರಳು
ಭುವಿಗೆ ವರವು
ಅನಂತ ಶಕ್ತಿಯ
ಅಮರ ರಸಾಯನವು ||
ಸ್ನೇಹವೆ ಲತೆಯು
ಸುಧೆಯು ಬಾಳಿಗೆ
ದೀವಿಗೆ ಜಗವು
ಸೃಷ್ಟಿಯ ಕಾಣಿಕೆಯು ||
*****
Latest posts by ಹಂಸಾ ಆರ್ (see all)
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
- ಅವ್ವನ ಹಸಿರ ರೇಶಿಮೆ - December 30, 2020