ಹಾರೆ ನೀ ಹಕ್ಕಿ ಹಾರೆ
ನೀಲಾಕಾಶದ ದಿಗಂತದಲಿ
ಬೆಳ್ಳಿ ಚುಕ್ಕಿ ಬಿಡಿಸಿ ರಂಗೋಲಿ
ಬಾರೆ ನೀ ಹಕ್ಕಿ ಬಾರೆ
ನನ್ನ ನಿನ್ನ ಬಂಧ ತಿಳಿ ಹೇಳು ಬಾರೆ
ನೀ ಬಾರೆ ಜಾಣೆ ಹಕ್ಕಿ ||ಽಽಽಽ
ಬೆಳ್ಳಿ ಹಕ್ಕಿ ನೀನು ಬಂಗಾರ ಮೈ ಬಣ್ಣ
ಸಿಂಗಾರದ ನೆರಿಗೆ ಉಟ್ಟ ಚೆಲುವೆ
ಹೊಂಗನಸು ಹೊನಲ ಚೆಲ್ಲಿ
ಮನವ ಕದ್ದೆ ನೀನು ಏಕೆ ಹಕ್ಕಿ
ಬಾರೆ ತಿಳಿ ಹೇಳು ಬಾರೆ ಹಕ್ಕಿ
ನೀ ಬಾರೆ ಜಾಣೆ ಹಕ್ಕಿ ||ಽಽಽಽ
ಪಂಜರದಲಿ ಬಂದಿಯಾದ ಹಕ್ಕಿ
ಅಸೀಮ ದಿಗಂತದತ್ತ ರೆಕ್ಕೆ ಬಿಚ್ಚಿ
ಮುಗ್ಧ ಭಾವನೆಗಳ ಪಸರಿಸಿ
ಯಾರ ನಿಲುವಿಗೂ ಸಿಗದೆ
ಹಾರೆ ಹಕ್ಕಿ ಹಾರೇ ಎನ್ನ ಸ್ನೇಹತಾರೆ
ನೀ ಬಾರೆ ಜಾಣೆ ಹಕ್ಕಿ ||ಽಽಽಽ
*****