ಶ್ರೀ ಕೃಷ್ಣನ ಚರಣಕಮಲ
ಭಜಿಸು ಮನವೆ ನೀ
ಅವಿನಾಶೀ ಶ್ಯಾಮನ ಪದ-
ಕಮಲ ಭಜಿಸು ನೀ

ಲೋಕ ಒಂದು ನೀರ ಗುಳ್ಳೆ,
ಕಂಡರೇನು, ಕಡೆಗೆ ಸುಳ್ಳೇ!
ಬುವಿ ಬಾನಿನ ಮಧ್ಯೆ ಮಾಯೆ
ಮೆರೆವ ಮಿಥ್ಯಕಿಲ್ಲ ಎಲ್ಲೆ,

ಮನೆಯ ಬಿಟ್ಟ ಮಾತ್ರಕೇನು,
ಕಾವಿಯುಟ್ಟ ಶಾಸ್ತ್ರಕೇನು?
ನಾನು ನನ್ನದೆಂಬ ಮೋಹ
ಬಿಡದೆ ಹೇಗೆ ಮುಕ್ತೆ ನೀನು?

ಸಂಜೆ ಸುಳಿದು ಅಳಿಯುವಂಥ
ಹಕ್ಕಿ ದನಿಯು ಈ ಬಾಳು,
ಗಿರಿಧರನೇ ನಿನ್ನ ಮೀರಾ
ಜಗವ ಮೀರುವಂತೆ ಮಾಡು

******

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)