ಇಂದು ಸೂಕ್ಷ್ಮದರ್ಶಕ ತಂತ್ರಗಳನ್ನು ಬಳಸಿ ಅತ್ಯಂತ ಚಿಕ್ಕ ಕ್ಯಾಮರಾ, ವಿಡಿಯೋ, ಆಡಿಯೋಗಳನ್ನು ತಯಾರಿಸ- ಲಾಗುತ್ತದೆ. ಒಬ್ಬ ಹೊರಬಹುದಾದ ಕ್ಯಾಮರಗಳು ಇದ್ದ ಕಾಲವೊಂದಿತ್ತು ಇದೀಗ ಶರ್ಟಿನ ಬಟನ್‌ಗಳಲ್ಲಿ ಹೆಣ್ಣುಮಕ್ಕಳ ಕುಂಕುಮ ಬೊಟ್ಟುಗಳಲ್ಲಿ ವಾಚುಗಳಲ್ಲಿಯೂ ಸಹ ವಿಡಿಯೋ ಆಡಿಯೋಗಳನ್ನು ಸಂಯೋಜಿಸಲಾಗಿದೆ. ಇದರ ಫಲ- ವಾಗಿಯೇ ಇಂದು ಅನೇಕ ಗುಪ್ತ ಅಪರಾಧಗಳು, ಸವಾಲಾಗಬಲ್ಲ ಅಪರಾಧಗಳು ಗೊತ್ತಾಗದಂತೆ ಬೆಳಕಿಗೆ  ಬರುತ್ತ- ಲಿವೆ. ಆಧುನಿಕ ತಂತ್ರ ಜ್ಞಾನ ಮತು ಸತ್ಯಾನ್ವೇಷಣಾ ಪ್ರವೃತ್ತಿ ಹೆಚ್ಚಾಗುತ್ತಲಿದೆ. ಆಡಿಯೋ, ವಿಡಿಯೋ ಜತೆಗೆ ಅತ್ಯಂತ ಚಿಕ್ಕ ಕ್ಯಾಮರಾಗಳು ಬೆಳಕಿಗೆ ಬಂದಿವೆ.

ಇಂತಹ ಗುಪ್ತಚಾರ ಕ್ಯಾಮರಗಳಿಗೆ ಮುಂಭಾಗದ ಲೆನ್ಸಿನ ವ್ಯಾಸ ಕೇವಲ ಒಂದು ಮಿ.ಮೀ. ಇದನ್ನು ಒಂದು ವೈರ್ ಮೂಲಕ ಕಡ್ಡಿಪೆಟ್ಟಿಗೆ ಆಕಾರದ ಪ್ರೇಕ್ಷಕಕ್ಕೆ ಜೋಡಿಸಲಾಗಿರುತ್ತದೆ. ಇದು ಸುಮಾರು 75 ರಿಂದ 100 ಅಡಿಗಳ ಅಂತರದ ದೃಶ್ಯವನ್ನು ಸೆರೆಹಿಡಿಯುತ್ತದೆ. ಅದು ಗೊತ್ತಾಗದಂತೆ ಸ್ವಿಚ್ ಆನ್ ಮಾಡಿದರೆ ಸಾಕು ದೃಶ್ಯಸಂಕೇತಗಳು
ಕ್ಯಾಮರಾದಲ್ಲಿ ಮುದ್ರಿತವಾಗುತ್ತವೆ. ಇದರ ಬೆಲೆ ಕೇವಲ 60 ಸಾವಿರದಿಂದ 2.5 ಲಕ್ಷ ರೂಪಾಯಿಗಳು !!