ಮೋಡ ಕವಿದಿದೆ
ಬೆಳ್ಳಿ ಕಿರಣಕೆ
ಕವಿದ ಮೋಡವ ಸರಿಸುವರಾರು ||

ಕರಗಿದೆದೆಯಾ ತೆರೆಯ ಹಾಸುವ
ಬೆಳ್ಳಿ ಕಿರಣಕೆ ಏಳು ಬಣ್ಣ ತುಂಬಿ
ನೆಲದೆದೆಯಾ ತಂಪಾಗಿರಿಸಿ ವರ್‍ಷನಲ್ಲಿ
ಅನಂತವಾಗಿ ತಲ್ಲಣಗೊಳಿಸುವರಾರು ||

ತುಂತುರು ಹನಿಗಲ್ಲ ಸವರಿ
ತುಟಿಯಂಚಿನ ನಗುವನಿರಿಸಿ
ಬಯಕೆ ತುಂಬಿ ಚಿತ್ತಾರ ಬಿಡಿಸಿ
ಮನಕೆ ಹಿತವ ತಂದವರಾರು ||

ಸಂಜೆಗೆಂಪ ರಾಗರಂಜನಿಯಲಿ
ಹಾಡಿ ನಲಿಯುವ ಕೋಕಿಲ ಇಂಪಿಗೆ
ನರ್ತಿಸಿ ತನನ ನವಿಲ ಬೆರಗಿಗೆ
ಬಣ್ಣಗಳ ಓಕುಳಿ ಹೋಯ್ದವರಾರು ||
*****

Latest posts by ಹಂಸಾ ಆರ್‍ (see all)