ಧರೆಗಿಳಿದು ಬಂದಿದೆ

ಧರೆಗಿಳಿದು ಬಂದಿದೆ ಸ್ವರ್ಗದ ತಾಣವು
ಸುಂದರ ಮಂದಿರವು ನಮ್ಮ ಭಾರತ ಭೂಮಿ ||

ಭುವನ ಮನೋಹರ ಚೆನ್ನಯ ತಾಣವು
ತನ್ಮಯ ಚಿತ್ತದ ಜೀವರಾಶಿಗಳು
ಸೃಷ್ಟಿ ಸ್ಥಿತಿ ಲಯವು ನಮ್ಮ ಭಾರತವು ||

ಯುಗ ಯುಗಗಳೆ ತಾಳಿದೆ
ಗತ ವೈಭವ ಸಾರಿದೆ
ಕಣ ಕಣವೂ ನಿನ್ನ ಸ್ತುತಿಯನ್ನು
ಜಪಿಸಿದೇ ವಿಶ್ವ ಚೇತನವು
ನಮ್ಮ ಭಾರತವು ||

ವೀರ ರಮಣಿಸಂತ ಮಹಾತ್ಮರ
ಮಹಿಮೆ ಸಾರುತ ಮೆರೆದು
ಸುಭದ್ರತೆಯ ತೋರಿ ಜಗಕೆ
ಶಾಂತಿ ಮಂತ್ರವ ನೀಡಿದೆ ನಮ್ಮ ಭಾರತವು ||

ದ್ವೇಷ ಕ್ಲೇಶಗಳ ಅಳಿಸುತ
ಅಹಿಂಸೆ ಮಾಲೆಯ ಧರಿಸುತ
ಅಂದಕಾರ ನೀಗಿಸುತ ತ್ಯಾಗ
ಧರ್ಮ ಸೌಕ್ಯತೆಯ ಬೀಡಿದು
ನಮ್ಮ ಭಾರತವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಿರುಪ್ಪಲ್ಲಾಣ್ಡು- ೧
Next post ಕಂಬನಿಯೆ ಸುರಿಯದಿರು

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys