ನನ್ನದೆಂಬುದೇನಿದೆಯೋ ನಿನ್ನದೇ ಎಲ್ಲಾ
ಸೂತ್ರಧಾರಿ ನೀನಾಗಿರಲು ಪಾತ್ರಧಾರಿಗಳೆಲ್ಲಾ
ನಾನಾದರೋ ತಿಳಿಯೆ ಮಾಯದಾಸೆರೆಯಲಿ
ಎಲ್ಲೆಲ್ಲೂ ನೀನಿರಲು ಕಾಣದಾಗಿಹೆ ||ನ||

ಮೌನ ಮಾತಾಡುವುದೇ ಕಾಡುವುದೇ
ಪ್ರೇಮ ಸುಮ ಭಕುತಿಯಲಿ ಬಾಡುವುದೇ
ಬಾಳಿನಂದದ ದೀಪ ರೂಪವೆಸಗೆ
ಜೀವನವೆಂಬೋ ದೋಣಿ ಸಾಗುತಿದೆ ||ನ||

ಮನವಿಂದೇಕೋ ಅರಿಯೆ ಸುಳಿಯ ಸಿಕ್ಕಿ
ಅಂಕುಶ ಹಿಡಿಯೆ ಅಂಬಿಗ ನೀನಿರಲು
ಭಯವೇತಕೋ ಮತ್ತೆ ಬೆಳಕಿಗೆ ಕೈ ಹಿಡಿದು ನಡೆಸಲು
ನೀನು ನನ್ನದೆಂಬುದೇನಿದೆಯೋ ||ನ||
*****