ಭವ್ಯ ಭಾರತ ಭೂಮಿ ನಮ್ಮದು
ನವ್ಯ ಭಾರತ ಭೂಮಿ ನಮ್ಮದು
ಶಾಂತಿ ಸಹನೆ ನೀತಿ ನೇಮ ಗಣ
ಭಾವೈಕ್ಯತೆಯ ಗೂಡು ನಮ್ಮದು ||

ಜನನಿ ಜನುಮ ಭೂಮಿ ಸ್ವರ್‍ಗ
ತಾಳ ಮುಗಿಲ ಕಾನನದೊಳಗಣಾ
ಸಮೃದ್ಧಿ ಚೆಂದ ಗಂಧ ಮೆರೆದ
ಭಾವೈಕ್ಯತೆಯ ಗೂಡು ನಮ್ಮದು ||

ಕನಕ ದೃಷ್ಟಿ ವನಿತ ಭಾವ
ನಿತ್ಯ ವರ್‍ಣ ಚೇತನ ಕಾಮನ
ಸತ್ಯ ಧರ್‍ಮ ಕರ್‍ಮ ಮರ್‍ಮ
ಬೆಸೆದ ಜಗದ ಭೂಮಿ ನಮ್ಮದು ||

ಋತು ಚಕ್ರಧಾರೆಯಲ್ಲಿ ಕೀರ್‍ತಿ
ಶಿಖರ ಕೇರಿ ಉದಯಕಿರಣ
ಸುದಯ ಅಭಿಮಾನದಾನಂದ ಮೆರೆದ
ಪುಣ್ಯ ಭೂಮಿ ದೇಶ ನಮ್ಮದು ||

ಸಂತ ಸಾಧು ವೀರಗಾಥ
ತ್ಯಾಗರೂಪ ದೀಪವಂದನ
ಅಮರ ಗಾನ ವಿರಾಟ ಮನನ
ಜನ್ಮಕರ್‍ಮ ಭೂಮಿ ನಮ್ಮದು ||
*****

Latest posts by ಹಂಸಾ ಆರ್‍ (see all)