ಹಾಡಿನಂದ ರೂಪ
ನಾನು ಕಲಿಯಲಿಲ್ಲ
ಕಲಿಸಿದಾದರೇನು ನಾನು ಕಲಿಯಲಿಲ್ಲ ||

ಹೃದಯವಂತಿಕೆಯ ಪ್ರೀತಿ
ಯಾರು ತೋರಲಿಲ್ಲ ಯಾರಿಗೂ
ಯಾರೆಂದನರಿತು ಮನವು ತಿಳಿಯಲಿಲ್ಲ ||

ಹಾಡು ಬರಿದಾದರೇನು
ನನ್ನ ಭಾವಗಳು ಬರಿದಾಗಲಿಲ್ಲ
ಭಾವನಂದದ ರೂಪ ಕಲಿಸಿದಾದರೇನು
ನಾನು ಕಲಿಯಲಿಲ್ಲ ||

ಬಿರಿದ ಹೂವು ಪರಿಮಳ
ಆಸರೆಯಾದ ಬಳ್ಳಿ ಮರಕೆ
ಸೆರೆಯಾದರೇನು ನಾನು ಸೆರೆಯಾಗಲಿಲ್ಲ ||
*****