Home / Kannada Poetry

Browsing Tag: Kannada Poetry

“ಗೊರಕೆ ಸಾಕು… ಪೊರಕೆ ಬೇಕು” ಬಾಚಿದ್ದವರನು ನೋಡಿದ್ದಾಗಿದೆ ದೋಚಿದ್ದವರನು ಸಹಿಸಿದ್ದಾಗಿದೆ //ಪಲ್ಲವಿ// ಮಂತ್ರಕ್ಕೆ ಮಾವು ಉದುರುವುದಿಲ್ಲ ತಂತ್ರಕ್ಕೆ ಅಂತಿಮ ಜಯವಿಲ್ಲ // ಗೊರಕೆ ಬೇಕು… // ಬೀದಿಗೆ ಬಂದರೆ ಜಯವೇ ಎ...

ಚಿಂತಲ್ ಬಸ್ತಿ ಚಿಂತಲ್ ಬಸ್ತಿ ಬಡವರ ಬಗ್ಗರ ಅಗ್ಗದ ಆಸ್ತಿ ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ ರಾಮುಡು ಭೀಮುಡು ಪರಮೇಶ್ವರುಡು ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ ಎಲ್ಲರಿಗೂ ಇದು ಒಂದೇ ಮಾಡು ಇರುವಂತೆಲ್ಲರಿಗೊಬ್ಬನೆ ಅಲ್ಲಾ! ಆಚೆಗೆ ಬಯಲು ಈಚೆಗೆ ರೈಲು...

ಕದಳಿಯ ಸುಳಿಯೇ ಕದಳಿಯ ಹೂವೇ ಕದಳಿಯ ಫಲವೇ ನಿಮ್ಮೆಲ್ಲರನೂ ಒಂದ ಬೇಡುವೆನು ಹರನೇ ತನಗೆ ಗಂಡನಾಗಬೇಕೆಂದು ಅನುದಿನವೂ ಹಂಬಲಿಸಿ ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ ಚೆಲುವನನು ಬೆಂಬತ್ತಿ ನಿಮ್ಮೀ ಕದಳಿ ಬನವ ಪೊಕ್ಕ ನನ್ನಕ್ಕ ಹೊಳೆವ ಕೆಂಜೆಡೆಗಳ ಸುಲಿಪಲ್...

ಬರುತಾರೆಂದರೆ ಬೇಂಡಿನವರು ಎಲ್ಲರೆದೆಯು ಢುಂ ಢುಂ ಮದುವೆಯಾದರು ಮುಂಜಿಯಾದರು ಬಾರಿಸುವರು ಢಂ ಢಂ ಜರಿ ರುಮಾಲು ತಲೆಯ ಮೇಲೆ ಗರಿ ಗರಿಯ ತುರಾಯಿ ನೋಡುತಾರೆ ನೋಡುವವರು ಬಿಟ್ಟು ಬಾಯಿ ಬಾಯಿ ಜಗ ಜಗಿಸುವ ಕೆಂಪು ಕೋಟು ಹಿತ್ತಾಳಿಯ ಗುಂಡಿ ಮಹಾರಾಜರಂಥದರ ...

ಎಲ್ಲರೂ ದಡ ಸೇರಿದರು ನಾನು ಮಾತ್ರ ನಡು ನೀರಿನಲ್ಲಿ ಎಲ್ಲರೂ ಹೊಳದಾಟಿದರು ನಾನು ಮಾತ್ರ ಮುರುಕು ದೋಣಿಯಲ್ಲಿ ಕತ್ತರಿಸುತ್ತಿದೆ ಚಳಿ ತತ್ತರಿಸುತ್ತಿದೆ ಎದೆ ನಡುಗಿ ಅಲೆಯೊಳಗೆ ತೇಲಿ ಬಿಟ್ಟಿರುವೆ ಕಂಬನಿಯ ಮಾಲೆ ಇರುವುದೊ ಇಲ್ಲವೊ ನಾನರಿಯೆ ನನ್ನ ಪಾ...

ಓ ಬೆಟ್ಟ ಬಯಲುಗಳೆ ಕಣಿವೆ ಕಡಲುಗಳೆ ನಾನು ನಿಮ್ಮ ಕವನ ಬೇಡ ಧಾವಂತ | ಉಳಿಸಿ ಜೀವಂತ ಕೊಳ್ಳಿ ನನ್ನ ನಮನ //ಪ// ಬೆಳಕ ಚೆಲ್ಲಿದ ಬೆಳ್ಳಿ ಸೂರ್ಯನಿಗೆ ಕತ್ತಲ ಪರದೆಗಳಿಲ್ಲಿ ತಂಪು ನೀಡುವ ತುಂಬು ಚಂದ್ರನಿಗೆ ತಾಪದ ಮುತ್ತಿಗೆಯಿಲ್ಲಿ ಬೀಸಿ ಬರುವ ತಂಗಾ...

ಆ ಊರಿಗೆ ನೀವು ಹೋಗಲೆಬೇಡಿ ಅಥವಾ ಹೋದರೆ ಆ ಓಣಿಯಲಿ ನಡೆಯಲೆಬೇಡಿ ಅಥವಾ ನಡೆದರೆ ಆ ಮನೆ ಬಾಗಿಲ ತೆರಯಲೆಬೇಡಿ ಅಥವಾ ತೆರೆದರೆ ಆ ಹಳೆ ಪಟ್ಟಿಗೆ ಮುಟ್ಟಲೆಬೇಡಿ ಅಥವಾ ಮುಟ್ಟಿದರೆ ಅದರೊಳಗೇನಿದೆ ನೋಡಲೆಬೇಡಿ ಅಥವಾ ನೋಡಿದರೆ ಆ ಕಾಗದ ಚೂರನು ತಗೆಯಲೆಬೇಡ...

ಯಾಕೆ ಬಂದೆ ಯಾಕೆ ನಿಂದೆ ಕಿಟಕಿಯಲ್ಲಿ ಚಂದಿರ ಸನ್ನೆ ಮಾಡಿ ಕರೆಯಬೇಡ ಬೆಣ್ಣೆ ಮಾತಾಡಬೇಡ ಹೋಗಿ ಬಿಡು ಚಂದಿರ ಪಕ್ಕದಲ್ಲಿ ಗಂಡನಿರುವ ತೊಟ್ಟಿಲಲ್ಲಿ ಕಂದನಿರುವ ಅಕ್ಕಪಕ್ಕ ನೋಡಿಯಾರು ನೂರು ಕತೆಯ ಕಟ್ಟಿಯಾರು ಹೋಗಿ ಬಿಡು ಚಂದಿರ ನಿನ್ನ ನೋಡಿ ಆಶಪಟ್ಟ...

ಆನೆ ಬಂತೊಂದಾನೆ ಆನೆ ಬಂತೇನೆ ಆನೆಯಷ್ಟೇ ದೊಡ್ಡ ಆನೆ ಸರಿ ತಾನೆ ಭಾರಿ ಕಂಭಗಳಂತೆ ಅದರ ಕೈಕಾಲು ಸೊಂಡಿಲೆಂದರೆ ತೂಗಿ ತೊನೆವ ಬಿಳಲು ದೊರಗು ಮೈ ಗೆರಸೆ ಕಿವಿ ಅದರಂತೆ ಗೋಣು ಏನೊ ಹೇಳಲು ಬಯಸುವಂಥ ಕಿರುಗಣ್ಣು ನೋಡಿದರೆ ಎಲ್ಲರೂ ಹೊರಬೀದಿಗಿಳಿದು ಎಂದಿ...

೧ ನನ್ನ ಅಜ್ಜಿಯದು ತುಂಬು ಸಂಸಾರ ನನ್ನ ಅವ್ವನಿಗೆ ನಾಲ್ಕು ಮಂದಿ ಮಕ್ಕಳು ನನಗೆ- ಒಬ್ಬಳೇ ಹೆಣ್ಣು ಮಗಳು ಎಲ್ಲ ನೆನಪಾಗುವುದು- ನಾನು, ನನ್ನ ತಂಗಿ ತಮ್ಮಂದಿರು ಹಂಚಿಕೊಂಡೆವು ಅನ್ನದಂತೆಯೇ ಪ್ರೀತಿಯನ್ನು ಸಾಧಿಸಿದೆವು ದ್ವೇಷವನ್ನು ಬಿಟ್ಟುಕೊಟ್ಟವು...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...