Home / Kannada Poetry

Browsing Tag: Kannada Poetry

ಹಳ್ಳಿ ರಾಜಕೀಯ – ಯಾರೊಬ್ಬರೂ ತೇಲಲ್ಲ ಯಾರೊಬ್ಬರೂ ಮುಳುಗೊಲ್ಲ ಯಾರೊಬ್ಬರೂ ದಡ ಸೇರಲ್ಲ ಹಳ್ಳಿ ರಾಜಕೀಯ – ಯಾರೊಬ್ಬರೂ ಬೆಳಿಯಲ್ಲ ಯಾರೊಬ್ಬರೂ ಅಳಿಯಲ್ಲ ಯಾರೊಬ್ಬರೂ ಉಳಿಯಲ್ಲ ಹಳ್ಳಿ ರಾಜಕೀಯ – ಹಾವು ಸಾಯೊಲ್ಲ ಕೋಲು ಮುರಿಯೊಲ...

ಕೇಳಿ ಭಟ್ಟರೆ ಏಳಿ ಶೆಟ್ಟರೆ ಎರಡು ಸಾವಿರ ಖಂಡಿಗೆ ಇಂದೆ ಸಾಗಿಸಿ ಈಗ ಸಾಗಿಸಿ ಎಲ್ಲ ಸರಕನು ಮಂಡಿಗೆ ಗೂಗೆ ಹೇಳಿತು ಕಾಗೆ ಕೇಳಿತು ಸೋಗೆ ನಕ್ಕಿತು ಮೆಲ್ಲಗೆ ಮಾವು ಚಿಗುರಿತು ಬೇವು ಕೊನರಿತು ಬಂತು ಮಾಗಿಯು ಊರಿಗೆ ಹೊದ್ದು ಕಂಬಳಿ ಇಡಿಯ ಹೋಬಳಿ ಎದ್ದ...

ಕಪ್ಪಿಟ್ಟ ಮುಖ ಮಿಂಚು ಕಣ್ಣುಗಳು ಬೆಂಕಿ-ಬಿಸಿಯುಸಿರು ಗುಡುಗು-ಸಿಡಿಲು ಮೃದು ವಚನಗಳು! ಅವಳು ಕಣ್ಣು ನೆಟ್ಟಲೆಲ್ಲಾ ಕಂದಕಗಳು ತೋಳುಗಳು ತಾಕಿ ನೆಲಕ್ಕುರುಳಿದವು ಹೆಮ್ಮರಗಳು ಕಾಲಾಡಿದಲ್ಲೆಲ್ಲಾ ಚಿಮ್ಮಿದವು ಬಿಸಿ ನೀರ ಬುಗ್ಗೆಗಳು ತಲ್ಲಣಿಸಿತು ಸಕಲ...

ಕಡಲೂ ಹೇರಳ ಕೆರೆಯೂ ಹೇರಳ ತುಂಬಿದ ಕೆರೆಯೂ ಹೇರಳ ಕೇರಳ ಕೇರಳ ಕೇರಳ ಬಿಸಿಲೂ ಹೇರಳ ಮಳೆಯೂ ಹೇರಳ ಹರಿಯುವ ಹೊಳೆಯೂ ಹೇರಳ ಕೇರಳ ಕೇರಳ ಕೇರಳ ಮರವೂ ಹೇರಳ ಗಿಡವೂ ಹೇರಳ ಹಸಿರಿನ ಮಲೆಗಳು ಹೇರಳ ಕೇರಳ ಕೇರಳ ಕೇರಳ ತಾಳೆಯು ಹೇರಳ ಬಾಳೆಯು ಹೇರಳ ನಾರೀಕೇಳವ...

‘ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಮಗುವಾಗಿದ್ದಾಗಿನಿಂದಲೂ ಬಲ್ಲ ಅವನನ್ನು ‘ಬಾ’ ‘ಬಾ’ ಎಂದವನ ಎಷ್ಟು ಸಲ ಕರೆದಿದ್ದೆನು ಬರುವನೊ, ಬಾರನೊ, ತಿಳಿಯದೆ ಇಂದಿಗೂ ಕಾಯುತ್ತಲೇ ಇರುವೆನು ಹೇಳಿ ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಯಾವ ಕಾಲದಲ್ಲಿ, ...

ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು ಅಷ್ಟನು ದೋಚಿ ಇಷ್ಟನು ಹಂಚಿ ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು ನೋಟನು ಕೊಟ್ಟಿಹೆವು ಜನರ ಓಟನು ಕೊಂಡಿಹೆವು ದೋಚಲು ಎಲ್ಲವ ಐದು ವರ್ಷಕೆ ಕಾಂಟ್ರ್ಯಾಕ್ಟ್ ಪಡೆದಿಹೆವು ನಾವು ಕಾಂಟ್ರ್ಯಾಕ್ಟ್ ಪಡೆದ...

ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಗುಡುಗಿತು ಕಾಡು ನಡುಗಿತು ನಾಡು ಉರುಳಿತು ಒಂದೊಂದೇ ಮನೆ ಮಾಡು ಇಲಿಯೋ ಹುಲಿಯೋ ಹುಡುಕಿಸಿ ನೋಡು ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಅವಲೋಕಿತೇಶ್ವರನಿಂದ ಕಲಿ!...

೧ ಮಹಾಯಾನ ತಾನು ತುಂಬಾ ಸಣ್ಣವನು ಅಂದುಕೊಂಡವನು ಬೃಹತ್ ಬುದ್ಧನನು ಕೆತ್ತಿದ ಆಹಾ! ಏನು, ಆಳ, ಅಗಲ, ವಿಸ್ಕಾರ- ಆಕಾಶದೆತ್ತರ! ಗುಲಾಬಿ ಮೃದು ಪಾದಗಳನ್ನು ಕೆತ್ತುತ್ತಾ, ಕಿತ್ತುತ್ತಾ ಕಣ್ಣು, ತುಟಿ, ಮೂಗು ಮುಂಗುರುಳ ಅರಳಿಸುತ್ತಾ ನೆಲದಲ್ಲಿದ್ದವ ಮ...

ಒಂದೇ ಒಂದೇ ಒಂದೇ ಮನುಷ್ಯರೆಲ್ಲರು ಒಂದೇ ಒಂದೇ ಭೂಮಿ ಒಂದೇ ನಿಸರ್ಗ ಮನುಷ್ಯರಿಗಿರುವುದು ಒಂದೇ ಸ್ವರ್ಗ ಒಂದೇ ಜಾತಿ ಒಂದೇ ವರ್ಗ ಉಳಿದುದಲ್ಲವೂ ಅಳಿವಿನ ಮಾರ್ಗ ಒಂದೇ ಗಾಳಿ ಒಂದೇ ನೀರು ಒಂದೇ ಹುಟ್ಟು ಸಾವಿನ ತೇರು ಒಬ್ಬನೆ ಗುರು ಒಬ್ಬನೆ ದೇವರು ಇರ...

ಹತ್ತೂ ಜನರು ಓದಿಯಾದ ಮೇಲೆ ನನ್ನ ಕೈಸೇರಿತು ಮಹಮದನ ಪತ್ರ ತನ್ನೂರಿನ ಬಗ್ಗೆ ತನ್ನ ಅಕ್ಕ ತಂಗಿಯರ ಬಗ್ಗೆ ಮಲ್ಪೆಯ ಮೀನು, ಸಮುದ್ರದ ಹಿನ್ನೀರು ಗೇರು ಹಣ್ಣು, ಗುಳ್ಳದ ಬಗ್ಗೆ ಏನೆಲ್ಲ ಅಚ್ಚ ಕನ್ನಡದಲ್ಲಿ ಬರೆದಿದ್ದ ಪತ್ರ ‘ಈದ್’ಗೆ ಮನೆಗೆ ಬರಲೇಬೇಕೆ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...