ಕನಕ-ಕೃಷ್ಣ

ಕನಕ ಕುರಿ ಕಾಯುತ್ತಿದ್ದ
ಕೃಷ್ಣ ದನ ಮೇಯಿಸುತ್ತಿದ್ದ
ಪರಿಚಯವಾಯಿತು ಹೆಚ್ಚೇನಿಲ್ಲ…

ಕನಕ ರೊಟ್ಟಿ ಒಯ್ಯುತ್ತಿದ್ದ
ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ
ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ…

ಕನಕನಿಗೆ ಹಾಡು ಕಟ್ಟುವ ಹುಚ್ಚು
ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು
ಗೆಳೆತನ ಕುದುರಿತು ಹೆಚ್ಚೇನಿಲ್ಲ…

ಕನಕ ‘ಬ್ಯ’ ‘ಬ್ಯಾ’ ಎಂದೂ
ಕೃಷ್ಣ ‘ಅಂಬಾ’ ಎಂದೂ
‘ಕಿರ್ ಕಿರ್’ ‘ಮುರ್ ಮುರ್’ ಕೂಗು ಹಾಕಿ
ಕೂಡಿ-ಆಡಿ ನಲಿದರು ಹೆಚ್ಚೇನಿಲ್ಲ…

ಕೃಷ್ಣ ಮಹಾತುಂಟ, ತುಡುಗ,
ತರಲೆ, ಜಗಳಗಂಟ…
ಕನಕ ಅವನ ಭಂಟ, ನೆಂಟ, ಸರ್ವಸ್ವ…
ಇಬ್ಬರೂ ಬದುಕಿ-ಬಾಳಿದರು ಹೆಚ್ಚೇನಿಲ್ಲ…

ಕುಲದ ನೆಲೆಯಲ್ಲ… ಕಾಲದ ಹಂಗಿಲ್ಲ…
ಕನಕ ಮಣ್ಣಾದ, ಕೃಷ್ಣ ಕಲ್ಲಾದ…
ಇದೊಂದು ಕಲ್ಲು-ಮಣ್ಣಿನ ಕತೆ ಹೆಚ್ಚೇನಿಲ್ಲ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೨
Next post ಬಿಡು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…