Home / Kannada Poetry

Browsing Tag: Kannada Poetry

ಒಂದು ಕಾಲವಿತ್ತು ಆಗ ನನ್ನ ಕೂಗಿನಿಂದಲೇ ಬೆಳಗಾಗುತ್ತಿತ್ತು ಮುಂಜಾನೆಗೆ ಹೆಸರೇ ಇತ್ತು “ಕೋಳಿ ಕೂಗೋ ಹೊತ್ತು” ಎಂದು. ನಾನು ಕೂಡ ಸುಂದರ ಬಾತುಗಳಂತೆ ರಾಜ ಹಂಸಗಳಂತೆ. ನನಗೂ ಮೋಹಕ ನಡಿಗೆ ಇತ್ತು ದೊಡ್ಡ ಸಂಸಾರವಿತ್ತು ನನ್ನ ಮರಿಗಳೊಂ...

ಹೊತ್ತು ತಂದ ಹೊರೆಯನ್ನು ದಾರಿಯುದ್ದಕ್ಕು ಹೊತ್ತದ್ದು ಹೆಚ್ಚು ಇಳಿಸಿದ್ದು ಕಡಿಮೆ. ತುಂಬಾ ಹಿಂದುಳಿಯಿತು ನನ್ನ ಸುಂದರ ನೀಲ ಆಕಾಶ! ಜೀವನಾಂಕುರಿಸುವ ನಗಿಸುವ ಮಣ್ಣಿನ ಆಕರ್ಷಣೆ ಸರಿದು ಹೋಯಿತು. ಈ ರಿಕ್ತ ನಿವೃತ್ತಿ ಹೊರೆಯಾಗಿ, ಮರೆಯಾಗಿ ನನ್ನನ್ನ...

ಸಾಕು ನಿಲ್ಲಿಸು ನಾಗರಿಕ ಭಾಷೆಯಲ್ಲಿ ಮಾತಾಡು ಮನುಷ್ಯರ ಹಾಗೆ ಮಾತಾಡು ಪ್ರತಿಮೆ ಪ್ರತೀಕ ಪ್ರಾಕಾರ ಎಂದು ಮೇಜಿಕ್ಕು ಕಾವ್ಯ ಗೀಚುತ್ತೀಯಾ ಆಮೇಲೆ ಲಾಜಿಕ್ಕು ಬೊಗಳುತ್ತೀಯಾ ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ ಗುಂಪುಗಾರಿಕೆ ನಡೆಸುತ್ತೀಯಾ ...

ಮತ್ತೆ ಮೋಹಿಸುವ ಬಯಕೆ ತೃಷೆ ತೀರದು ಹಲವು ಸಲ ಜಗಿದರೂ ಈ ರಸ ತೀರದು, ಒಸರಿ ಬರುವ ಒರತೆ ನಿಲ್ಲದೆಂದೇ ತೋರಿದೆ, ಬದುಕೇ ಬಾಯಾರಿದೆ ಸ್ವೀಕರಿಸು ಓ ಬದುಕೇ ನನ್ನದೆಲ್ಲವೂ ನಿನ್ನದೇ ಏಕಿನ್ನೂ ಸಂಕೋಚ, ಸವಿಯಲೆಂದೇ ನಾವು ಇಹುದಲ್ಲವೇ, ನಮ್ಮೆದೆಯ ತೋಟಗಳ ...

ನೆರೆಯವರು ನಕ್ಕರು: “ಇವನಿಗೆ ಹುಚ್ಚು ಕಚ್ಚಿದೆ ಮುಖದಲ್ಲಿ ದಿಗಿಲು ಬಿಚ್ಚಿದೆ ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ ಮೊಸರನ್ನದ ಬಲಿಕೊಟ್ಟರೆ ಹೊಸದನಿ ಮಾಯುತ್ತದೆ. ಇವನು ಹೊಸಿಲು ದಾಟದಂತೆ ಕಾಯುತ್ತದೆ.” ಅವರಿಗೇನು ಗೊತ್ತು ಪ್ರತಿ ರ...

ರಾಜಮಹಾರಾಜರ, ಚಕ್ರವರ್ತಿ ಬಾದಶಹರ ಜೀವ ಕಾಪಾಡಲು, ನೆರಳಂಬಂತೆ ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ. ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ, ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ. ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ. ...

ನನ್ನ ಕಾಲೇಜಿನೆದುರು ಯಮಾಲಯದಂತೆ ನಿಂತಿರುವ ರೋಗಗ್ರಸ್ತ, ಜರ್ಜರ ಮಹಾಮಹಡಿಯ ಪ್ರಾಚೀನ ಮಂದಿರದಲ್ಲಿ ದೇವರಿಲ್ಲ ಅವನ ಬದಲಿಗೆ ಅಧಿಕೃತ ಏಜಂಟ್‌ಗಳಾಗಿ ಮುದಿ, ತರುಣ ವೈದ್ಯರು ಗೌರ, ಮೃದು ಭಾವದ ನರ್ಸುಗಳು ಸೇವೆಯ ಪಣ ಹೊತ್ತು ಯಾವದೋ ಜನ್ಮದ ಋಣತೆರುವ ...

ನಮ್ಮ ವಠಾರದ ಪೂರ್ಣಕುಂಭಾ ಜಂಭಾ ಕುಳಿತರೆ ಸೋಫಾ ತುಂಬಾ ಹರಡುವ ಭಾರೀ ನಿತಂಬಾ ಹುಟ್ಟಿನಲ್ಲೇ ಬೆಂಕಿ ಪೊಟ್ಟಣ ಉರಿಯಿತು ಒಳಗೇ ಹೊರಗೇ ಪಟ್ಟಣ ಕೋಣೆ ಕಛೇರಿಗಳೊಳಗೆ ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ ಇವರು ಶ್ರೀಮತಿ ಮದಿರಾಕ್ಷಿ ತುಟಿ ಚೂಪು ಮಾಡಿ ಕಿ...

ಅಚ್ಚರಿ ಕಚ್ಚಿದ ಬದುಕಿನ ಆಸೆ ಮುಗಿಯದು. ನುಡಿಯಲು ಭಾಷೆ ಸಾಲದು. ಬೆದೆ ಕುದಿವ ಗೂಳಿಯ ಕುರುಡು ಆವೇಶಕ್ಕೂ ಬರಡು ಹಸು ಬಸಿರು ತಾಳದು ಪಹರೆ ದನಿಗಳೆಲ್ಲ ಮುಜುರೆಮಾಡಿ ಸರಿದವು. ಈಗ ನನ್ನದೆ ಕೊರಳು, ತಪ್ಪಿ ಕೊರಳಿಗೆ ಬಿದ್ದರೆ ನನ್ನದೆ ಉರುಳು, ಬಾಕಿ ...

ಪ್ರಾಣ ಇದ್ದವು ಅದನ್ನು ಕಳೆದುಕೊಂಡಾಗ ಸಂಭವಿಸುವುದು ಸಾವು. ಸೂಕ್ಷ್ಮಾತಿ ಸೂಕ್ಷ್ಮಜೀವಿ, ಜಲಚರ, ಪಶು, ಪಕ್ಷಿ ಸಕಲ ಸಸ್ಯ, ವೃಕ್ಷ ದೈತ್ಯ ಕಾಯ ಎಲ್ಲಕೂ ನಿಶ್ಚಿತ.. ಸಾವು. ‘ಜಾತಸ್ಯ ಮರಣಂ ಧೃವಂ’. ಮಾನವನ ಮಾತೇ ಬೇರೆ. ಅವನ ಅಂತ್ಯಕ್ಕೆ ಬರಬೇಕಿಲ್ಲ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....