Home / Lakshminarayana Bhatta

Browsing Tag: Lakshminarayana Bhatta

ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ- ಯೆದುರು ಗೌರವ ಮೆರೆದರದು ನನಗೆ ಲಾಭವೇ? ಸುಸ್ಥಿರ ಭವಿಷ್ಯ ಜೀವನಕೆಂದು ಅಡಿಪಾಯ ಹಾಕುವುದು ವ್ಯರ್‍ಥ ಎಂದೇನು ನಾ ಅರಿಯೆನೆ ? ಸರಳನಡೆ ನೀಗಿ, ಆಡಂಬರಕೆ ಬಲಿ ಹೋಗಿ, ಅಂತಸ್ತು ಠೀವಿ ಸಭೆಮನ್ನಣೆಗೆ ಸಿ...

ನನ್ನೊಲವು ರಾಜಕಾರಣಕೆ ಹುಟ್ಟಿದ್ದಿತೊ ಕಾಲಕಾಲದ ಪ್ರೀತಿದ್ವೇಷಕ್ಕೆ ಪಕ್ಕಾಗಿ, ಕಸದಲ್ಲಿ ಕಸವೊ, ಹೂರಾಶಿಯಲಿ ಬಿಡಿಹೂವೊ ಆಗಿ ಅಳುತಿತ್ತು ತಬ್ಬಲಿ ಭ್ರಷ್ಟಹುಟ್ಟಾಗಿ. ಅದರ ಅಡಿಗಿಲ್ಲ ಆಕಸ್ಮಿಕದ ತಳಪಾಯ, ಆಡಂಬರದ ಮಂದಹಾಸಕದು ಬಲಿಯಲ್ಲ; ಕಾಲಕಾಲಕ್ಕೆ...

ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು; ಕಾಲವೇ ನೀನು ಪೇರಿಸುವ ಪಿರಮಿಡ್ಡುಗಳು ಹೊಸದಲ್ಲವೇ ಅಲ್ಲ ನನ್ನ ಪಾಲಿಗೆ ಎಂದೂ; ಇಂದೂ ಅವು ಹಳೆಯ ದೃಶ್ಯಗಳ ಮರುನೋಟಗಳು. ಅಲ್ಪಾವಧಿಯ ಬಾಳು ಇದು, ಎಂದೆ ಮೆಚ್ಚುವೆವು ಹಿಂದಿನಿಂದಲು ನೀನು ತಂದು ನಮಗಿತ್ತುದನು...

ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ ಕೆಟ್ಟುಬಿಡುವುದೆ ಸರಿ ಅಪವಾದವಿದ್ದಾಗ, ನಮಗೆ ಅನ್ನಿಸದಿದ್ದೂ ಪರರ ಅನಿಸಿಕೆಯಿಂದ ಕಳೆಯುವುದು ನ್ಯಾಯವಾದೊಂದು ಸಂತಸ ಆಗ. ನನ್ನ ರಕ್ತಕ್ಕೆ ಪ್ರಿಯವಾದ ನಡವಳಿಕೆಗಳ ಪರರ ಹುಸಿಗಣ್ಣು ನಿಯಂತ್ರಿಸುವುದೇತಕ್ಕೆ ...

ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ ಕೊಟ್ಟ ಮೋಹಿನಿಯ ಕಂಬನಿಯ ಅದೆಷ್ಟು ಕುಡಿದೆ! ಭರವಸೆಗೆ ಶಂಕೆಯ ಶಂಕೆಗಾಸೆಯ ಬೆರಸಿ, ಗೆದ್ದೆ ಇನ್ನೇನೆಂಬ ಗಳಿಗೆಯಲ್ಲೇ ಬಿದ್ದೆ. ಕೊಳಕು ತಪ್ಪುಗಳಲ್ಲಿ ಬಳಸಿಯೂ ನಾನೆಂಥ ಅದೃಷ್ಟವಂತ ಎನ್ನುವ ಹಿಗ್ಗಿನಲ್ಲಿದ್ದೆ...

ರುಚಿಯನ್ನು ಕೆರಳಿಸಲು ಕಟುಮಸಾಲೆಗಳಿಂದ ಬೊಡ್ಡು ನಾಲಿಗೆಯನ್ನು ಚುರುಕುಗೊಳಿಸುವ ಹಾಗೆ, ಮೈಯ ರಕ್ಷಿಸಲು ಗೊತ್ತಿರದ ಬೇನೆಗಳಿಂದ ಅತಿ ಎನಿಸುವಷ್ಟು ಔಷಧ ತಿನ್ನಿಸುವ ಹಾಗೆ, ನಿನ್ನ ಗುಣ ಪ್ರೀತಿ ಮಾಧುರ್‍ಯ ಯಥೇಷ್ಟ ಸವಿದು ಚುರುಕು ಸಂಬಾರಗಳ ಕೆಣಕನ್ನ...

ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು ಒಪ್ಪುವವ ನಾನಲ್ಲ. ಒಲವು ಒಲವೇ ಅಲ್ಲ ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು ಬದಲಿತೆಂದಿನ್ನೊಂದು ಕದಲಿದರೆ. ಛೆ, ಇಲ್ಲ ಬಿರುಗಾಳಿಯಲ್ಲು ಕಂಪಿಸದೆ ನಿಲ್ಲುವುದು ಅದು ಸ್ಥಿರವಾದ ಜ್ಯೋತಿ, ಕಡಲಲ್ಲಿ ಕುರ...

ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು ಒರೆಸಿ ತೊಳೆಯುತ್ತಲಿದೆ ನಿನ್ನೊಲುಮೆ ಕರುಣೆ ಜಲ; ತಪ್ಪ ಬದಿಗೊತ್ತಿ ಒಪ್ಪಿರಲು ನೀ ಗುಣವನ್ನು ಲಕ್ಷ್ಯ ಮಾಡುವೆನೆ ಯಾರದೊ ನಿಂದೆ ಸ್ತೋತ್ರಗಳ? ನನ್ನೆಲ್ಲ ಲೋಕ ನೀನೇ, ನಿನ್ನ ಮುಖದಿಂದ ಬಂದುದಷ್ಟೇ ನನ್ನ ...

ಅಯ್ಯೋ, ಕಂಡಲ್ಲೆಲ್ಲ ಅಲೆದೆ, ಮಂದಿಯ ಮುಂದೆ ಕೋಡಂಗಿ ವೇಷದಲಿ ಕುಣಿದೆ ಒಳಗನ್ನಿರಿದೆ, ಹೊನ್ನನೆ ಹರಾಜು ಹಾಕಿದೆ ಹತ್ತು ಪೈಸಕ್ಕೆ, ಹಲುಬಿ ಹೊಸ ಸ್ನೇಹಕ್ಕೆ ಹಳೆಯದರ ಮುಖ ಮುರಿದೆ. ಸತ್ಯಕ್ಕೆ ಸೊಪ್ಪು ಹಾಕದೆ ಸೊಟ್ಟ ನಡೆದದ್ದು ನುಡಿದದ್ದು ಸುಳ್ಳಲ್...

ಗತಕಾಲದಿತಿಹಾಸ ಪುಟಗಳಲಿ ಮೆರೆದಿರುವ ಸಿರಿ ಚೆನ್ನಿಗರ ಪ್ರಶಂಸೆಗೆ ಕಣ್ಣು ಹರಿದಾಗ, ಮಡಿದ ನಾರಿಯರ, ಮನಸೆಳೆವ ವೀರರ ಚೆಲುವ ಹೊಗಳಿ ಹಳೆಕವಿತೆ ಥಳಥಳಿಸುವುದ ಕಂಡಾಗ, ತುಟಿ ಹುಬ್ಬು ಕಣ್ಣು ನಿಡಿದೋಳು ಅಡಿಗಳ ಸಿರಿಯ ಪರಿಪರಿಯ ಲಯವ ಹಿಡಿದಿಟ್ಟ ಹಳೆ ಕ...

1...1112131415...49

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...