Home / Kannada Poetry

Browsing Tag: Kannada Poetry

ಮಂಜಿಗೆ ನೆನೆಯದ ಮೈಯಿದ್ದರೆ ಅದು ಮೈಯಲ್ಲ ಕರುಣೆಗೆ ಕರಗದ ಮನವಿದ್ದರೆ ಅದು ಮನವಲ್ಲ ಗಾಳಿಗೆ ಅಲುಗದ ಎಲೆಯಿದ್ದರೆ ಅದು ಎಲೆಯಲ್ಲ ಬೆಂಕಿಗೆ ಉರಿಯದ ಹುಲ್ಲಿದ್ದರೆ ಅದು ಹುಲ್ಲಲ್ಲ ಹೂವಿಗೆ ಹಾರದ ಭ್ರಮರವಿದ್ದರೆ ಅದು ಭ್ರಮರವಲ್ಲ ವಸಂತಕೆ ಚಿಗುರದ ಮರವ...

ಬಸವನೆಂದರೆ ಸುಮ್ಮನೇ ಅವನೇ ನನ್ನೆದೆಯ ಗುರು ಉಸಿರಾಡಿದರೆ ಇಲ್ಲಿ ನನ್ನ ಒಡಲು ತಾಕುತ್ತದೆ ಅಲ್ಲಿ ಅವನಿಗೆ ಎದೆ ಮಿಡಿಯುತ್ತದೆ ನನಗಾಗಿ ತುಡಿಯುತ್ತದೆ ಅವನೆದೆಯ ಕಡಲು ಚೈತನ್ಯದ ಚಿಲುಮೆ ಇವ ಎಳೆದೊಯ್ಯುತ್ತಾನೆ ನನ್ನನ್ನೂ ಪುಟಿಯುವ ತತ್ಪರತೆಯ ಅಂತವಿ...

ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು ನಿನ್ನಿಂದ ನಡೆದಿರುವ ಸಣ್ಣ ತಪ್ಪುಗಳೆಲ್ಲ ಹೊನ್ನ ಪ್ರಾಯಕ್ಕೆ ಚೆಲುವಿಗೆ ತಕ್ಕವೇ, ಗೊತ್ತು ಬೆನ್ನಿಗೇ ಗಂಟು ಬಿದ್ದಿದೆ ಪ್ರಲೋಭನೆಯೆಲ್ಲ. ಸಭ್ಯ, ಹಾಗೆಂದೆ ಗೆಲ್ಲುವರೆಲ್ಲ ನಿನ್ನನ್ನು; ಚೆಲುವ, ಹಾಗೆಂದ...

ಶಬರಿಕಾದಳಂದು ಶ್ರೀರಾಮ ಬರುವನೆಂದು, ನಾನಿಂದು ಕಾದು ನೊಂದೆ ನಿನ್ನ ಪತ್ರ ಬರಲಿಲ್ಲವೆಂದು ಕಾಯುವುದು ಬೇಯುವುದು ಅವರವರ ಕರ್ಮ ಒಳಿತನಾಶಿಸಿ ಬಾಳುವುದು ಈಗೆಮ್ಮ ಧರ್ಮ. “ತಾಳಿದವನು ಬಾಳಿಯಾನು” ಎಂಬುದೊಂದು ಗಾದೆ ತಾಳಿ ತಾಳಿ ಸುಸ್ತಾದ...

ನಿನ್ನಳವಿನರಿವು ನನಗಿಲ್ಲ ಹೊನ್ನ ಬಣ್ಣವನು ತಿಳಿಯ ಬೇಕೆಂದಿಲ್ಲ ಚಿನ್ನ! ನಿರಂತರವಾದ ಸ್ವಭಾವ ಗುಣವನು ಪರತಂತ್ರನಾದ ಹುಲು ಮನುಜ ಎಂತು ಬಲ್ಲನು ಹೇಳು. ಅಂದು ಒಂದೆ ನೋಟಕೆ ಬಂದೆ ನನ್ನ ಬದುಕಿಗೆ ನಿನ್ನ ಬಯಕೆ ಅದೇನೋ ನನ್ನ ಬಯಕೆ ನೀನಲ್ಲ…&#8...

ಕಾಣದ ಕೈಯೆಂದು ಕಾಣದಕೆ ಹಂಬಲಿಸಿ ಹುಡುಕುವಿಯೇತಕೆ ಕಾಣುವ ಕೈ ಕೈಯಲ್ಲವೇ? ತೊಟ್ಟಿಲು ತೂಗಿದ ಕೈ ಅಟ್ಟುಣಿಸಿದ ಕೈ ಮೀಯಿಸಿದ ಕೈ ಬಟ್ಟೆಯುಡಿಸಿದ ಕೈ ತೊಡೆ ಮೇಲೆ ಕೂಡಿಸಿದ ಕೈ ಹಾಲೂಡಿದ ಕೈ ಒರೆಸಿದ ಕೈ ಬರೆಸಿದ ಕೈ ಕರೆದ ಕೈ ಚಾಚಿದ ಕೈ ಅಕ್ಕರೆಯಿಂದ ...

ಬಾಲಕನ ಚೂಟಿಯಾಟಕ್ಕೆ ಹಿಗ್ಗುವ ಹಾಗೆ ಮುಪ್ಪಾದ ತಂದೆ, ನಾ ವಿಧಿಯಸೂಯೆಗೆ ಸಿಕ್ಕು ವಿಕಲನಾದರು ನಿನ್ನ ಮೇಲ್ಮೆ ಯೋಗ್ಯತೆಗಳಿಗೆ ನೆಮ್ಮದಿಯ ತಾಳುವೆನು. ಸೌಂದರ್ಯ ಸಂಪತ್ತು ವಂಶ, ಧೀಶಕ್ತಿ – ಒಂದೇ ಇರಲಿ, ಕೂಡಿರಲಿ ಮೆರೆಯುತಿದೆ ತುತ್ತತುದಿ ನ...

ದೂರದ ಗೋವೆಯಿಂದ ವಧು ಬಂದಿತ್ತು ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು. ಕಣ್ಗಳೇ ಆಡಿದವು ನೂರಾರು ಮಾತು, ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು. ಬಾಂಧವ್ಯಕೆ ಭಾಷೆಯ ಬಂಧನವಿಲ್ಲ ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ ವ್ಯವಸ್ಥಿತ ಮದು...

ಹಾಳು ಬೀದಿ ಬಸದಿಯಲಿ ಗೋಳು ಕ್ಷಯ ಹಿಡಿದ ಬಾಳಿಗೆ ದೊಂಗಾಲು ಬಿದ್ದು ಕ್ರಿಮಿಗಳೋಪಾದಿ ಕೊಳೆವ ನರ ನಾರಾಯಣರ ಬಾಳು ಬಾಳೆ? ನೋಡಿರೈ ಅವರ ಜೀವಂತ ಮರಣ ಗುರಿರಹಿತ ಪಯಣ ಉದಾಸೀನ ನಯನ, ನಿಶ್ಯಕ್ತ ಹರಣ ಜೀವನದ ಅಲೆದಾಟ ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ...

ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ ಆವರಿಸಿದ ಸುಗಂಧವೇ ನಿನ್ನ ಹೆಸರು ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು ಸಂತೆಬೀದಿಗಳಲ್ಲಿ ಜನರ ನಡುವಿರುವಾಗ ಬೆಳುದಿಂಗಳಂತೆ ಬಂದ ಚೆಲುವೆ ನಿದ್ದೆ ಎಚ್ಚರಗಳಲಿ ಸ್ವಪ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....