ಬಸವನೆಂದರೆ ಸುಮ್ಮನೇ
ಅವನೇ ನನ್ನೆದೆಯ ಗುರು
ಉಸಿರಾಡಿದರೆ ಇಲ್ಲಿ ನನ್ನ ಒಡಲು
ತಾಕುತ್ತದೆ ಅಲ್ಲಿ ಅವನಿಗೆ
ಎದೆ ಮಿಡಿಯುತ್ತದೆ ನನಗಾಗಿ
ತುಡಿಯುತ್ತದೆ ಅವನೆದೆಯ ಕಡಲು
ಚೈತನ್ಯದ ಚಿಲುಮೆ ಇವ
ಎಳೆದೊಯ್ಯುತ್ತಾನೆ ನನ್ನನ್ನೂ
ಪುಟಿಯುವ ತತ್ಪರತೆಯ
ಅಂತವಿರದ ದಾರಿಗೆ ಹರಿಯ
ಚಿಡದೆ ನಿರಾಶೆಯ ನೋವನ್ನು
*****